ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಕುಟುಂಬದಿಂದ ಮತದಾನ - ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ
🎬 Watch Now: Feature Video
ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಕುಟುಂಬ ಸದಸ್ಯರು ಧಾರವಾಡ ನಗರದ ಸಪ್ತಾಪುರ ಬಡಾವಣೆಯ ಶಾರದಾ ಶಾಲೆಯಲ್ಲಿ ಮತದಾನ ಮಾಡಿದರು. ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಮಗ ಹೇಮಂತ, ವೈಶಾಲಿ, ದೀಪಾಲಿ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ ಕುಲಕರ್ಣಿ "ವಿನಯ್ ನಮ್ಮ ಜೊತೆ ಮತ ಹಾಕಲು ಬರದೇ ಇರೊದಕ್ಕೆ ಅವರನ್ನ ನಾವು ಮಿಸ್ ಮಾಡಕೊಳ್ತಿದ್ದೇವೆ. ಅವರು ಇಲ್ಲಿ ಇರಬೇಕಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ನನ್ನ ಮಗ ಹೇಮಂತ ಮೊದಲ ಬಾರಿ ಮತ ಹಾಕಿದ್ದಾನೆ. ಕ್ಷೇತ್ರದಲ್ಲಿ ಈ ಬಾರಿ ಒಳ್ಳೆ ವಾತಾವರಣ ಇದೆ. ಶಾಂತಿಯುತ ಮತದಾನ ನಡೆದಿದೆ" ಎಂದರು. ಮೊದಲ ಬಾರಿಗೆ ಮತದಾನ ಮಾಡಿದ ವಿನಯ್ ಮಗ ಹೇಮಂತ ಕುಲಕರ್ಣಿ ಮಾತನಾಡಿ "ಒಬ್ಬ ಜವಾಬ್ದಾರಿಯುತ ವ್ಯಕ್ತಿಗೆ ಮತ ಹಾಕಿದ್ದೇನೆ. ಮೊದಲ ಬಾರಿಗೆ ಮತದಾನ ಮಾಡಿರುವುದು ಖುಷಿ ಕೊಟ್ಟಿದೆ" ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಖಚಿತ: ಪ್ರಹ್ಲಾದ್ ಜೋಶಿ