thumbnail

By

Published : May 10, 2023, 5:19 PM IST

ETV Bharat / Videos

ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು!

ಬೆಂಗಳೂರು :  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಮತದಾನ ಮಾಡಲು ಸಾಧ್ಯವಾಗದೇ ಪರದಾಡಿರುವ ಘಟನೆಗಳು ಸಹ ನಡೆದಿದೆ. ಬೆಂಗಳೂರು ದಕ್ಷಿಣ ವಿಧಾನಸಭೆಯ ದೊಡ್ಡನಾಗಮಂಗಲ ಮತಗಟ್ಟೆ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಮತದಾರರು ಮತದಾನ ಮಾಡದೇ ಮನೆಗೆ ವಾಪಸಾಗಿರುವ ಘಟನೆ ನಡೆದಿದೆ. 

ಸುಮಾರು ಎಂಟು ಸಾವಿರ ಮತದಾರರಿಗೆ ಒಂದೇ ಮತಕೇಂದ್ರ ನಿಗದಿಯಾಗಿರುವುದೇ ಈ ನೂಕು‌ನುಗ್ಗಲಿಗೆ ಕಾರಣ ಎಂದು ಮತದಾರರು ದೂರಿದ್ದಾರೆ. ಮತದಾನಕ್ಕಾಗಿ ಬೆಳಗ್ಗೆಯಿಂದ ಕಾದರೂ ಸಾಲು ಸಾಗುತ್ತಿಲ್ಲ. ದಿನವೆಲ್ಲಾ ಹೀಗೆ ಕಾಯುವುದು ಹೇಗೆ ಎಂದು ಮತದಾರರು ಪ್ರಶ್ನಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಲಸೆ ಮತದಾರರು ಹೆಚ್ಚಿರುವ ಕಾರಣ ಚುನಾವಣಾಧಿಕಾರಿಗಳು ಮತಕೇಂದ್ರ ನಿರ್ಧರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೆಚ್ಚುವರಿ ಮತ ಕೇಂದ್ರ ತೆರೆಯಲು ಒತ್ತಾಯಿಸಿದರೂ ಚುನಾವಣಾಧಿಕಾರಿಗಳು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಪದ್ಮನಾಭ ನಗರದಲ್ಲಿ ಮತಗಟ್ಟೆ ಎದುರೇ ಮಾರಾಮಾರಿ.. ಕೈ ಕಾರ್ಯಕರ್ತರ ಮೇಲೆ ಪುಂಡರ ಗ್ಯಾಂಗ್​ನಿಂದ ಹಲ್ಲೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.