ಪ್ರೀ ವೆಡ್ಡಿಂಗ್ ಫೋಟೋ ಶೂಟ್​​ಗೆ ವೃದ್ಧನ ಡೈರೆಕ್ಷನ್​​.. ನಾವಿಕನ ಪ್ರತಿಭೆಗೆ ದಂಗಾದ ನೆಟ್ಟಿಗರು - ಪ್ರೀ ವೆಡ್ಡಿಂಗ್ ಶೂಟ್‌ಗೆ ನಿರ್ದೇಶನ

🎬 Watch Now: Feature Video

thumbnail

By

Published : Jan 23, 2023, 12:47 PM IST

Updated : Feb 3, 2023, 8:39 PM IST

ವಿಜಯವಾಡ: ಉತ್ತರಾಂಧ್ರದಲ್ಲಿ ಜೋಡಿಯೊಂದು ವಿಭಿನ್ನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಬಯಸಿದ್ದು, ಚಿನ್ನಪತಿ ನದಿಯನ್ನು ಲೊಕೇಶನ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು . ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ನವ ಜೋಡಿಗೆ ವಿಚಿತ್ರ ಅನುಭವವಾಗಿದೆ. ಸಾಮಾನ್ಯವಾಗಿ ಫೋಟೋ ಶೂಟ್ ವೇಳೆ ಕ್ಯಾಮೆರಾಮನ್ ಹೇಳಿದಂತೆ ವಧು - ವರರಿಬ್ಬರೂ ಪೋಸ್​ ಕೊಡುವುದು ಸಾಮಾನ್ಯ. ಆದರೆ ಇಲ್ಲಿ ಚಿಕ್ಕ ದೋಣಿಯನ್ನು ಓಡಿಸುವ ವಯಸ್ಸಾದ ನಾವಿಕರೊಬ್ಬರು ನೀಡಿದ ಸೂಚನೆಗಳನ್ನು ಅನುಸರಿಸಿ ವಧು - ವರರಿಬ್ಬರು ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. 

ಐವತ್ತರ ಆಸುಪಾಸಿನ ವ್ಯಕ್ತಿ ಈ ತಲೆಮಾರಿನ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್‌ಗೆ ನಿರ್ದೇಶನ ನೀಡುತ್ತಿರುವುದನ್ನು ನೋಡಿ ಅಲ್ಲಿ ನೆರೆದಿದ್ದವರೆಲ್ಲರೂ ಅಚ್ಚರಿಗೊಳಪಟ್ಟಿದ್ದಾರೆ. ಕ್ಯಾಮೆರಾಮನ್ ಇದನ್ನೆಲ್ಲವೂ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟಿಜನ್‌ಗಳು "ನೀವು ತುಂಬಾ ಪ್ರತಿಭಾವಂತರು", "ನಿಮಗೆ ವಯಸ್ಸಾಗಿದ್ರೂ ನೀವು ಗ್ರೇಟ್" ಎಂದು ಕಮೆಂಟ್ ಮಾಡುತ್ತಿದ್ದಾರೆ.

ಓದಿ: ರಿಷಬ್​ ಪಂತ್ ಬೇಗ​ ಗುಣಮುಖರಾಗಲೆಂದು ಮಹಾಕಾಳೇಶ್ವರನಿಗೆ ಭಾರತೀಯ ಕ್ರಿಕೆಟಿಗರ ವಿಶೇಷ ಪೂಜೆ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.