ಯುವಕನ ಮೇಲೆ ದುಷ್ಕರ್ಮಿಗಳಿಂದ ಮನಬಂದಂತೆ ಹಲ್ಲೆ: ವೈರಲ್ ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16707921-thumbnail-3x2-vny.jpg)
ಪ್ರತಾಪ್ಗಢ(ಉತ್ತರ ಪ್ರದೇಶ): ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ ಪ್ರತಾಪ್‌ಗಢದ ಮಂಧಾತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಿಟೈ ಕಾ ಪೂರ್ವ ಗ್ರಾಮದ ನಿವಾಸಿ ಆಲಂ ಎಂಬಾತ ಮನೆಗೆ ಹೋಗುತ್ತಿದ್ದಾಗ ಅಲ್ಲಿದ್ದ ಐವರು ಯುವಕರ ಗುಂಪು ಆತನನ್ನು ತಡೆದು ಹಲ್ಲೆ ನಡೆಸಿದೆ. ಯುವಕ ಕೆಳಗೆ ಬಿದ್ದರೂ ಬಿಡದೆ ಕಾಲು ಮತ್ತು ಚಪ್ಪಲಿಯಿಂದ ಥಳಿಸಿದ್ದಾರೆ. ಮಹಿಳೆಯೊಬ್ಬರು ಯುವಕನಿಗೆ ಥಳಿಸಬೇಡಿ ಎಂದು ಮನವಿ ಮಾಡಿದ್ರೂ ದುಷ್ಕೃತ್ಯ ಮುಂದುವರೆಸಿದ್ದಾರೆ. ಘಟನೆಯ ವೈರಲ್ ವಿಡಿಯೋ ಇಲ್ಲಿದೆ.
Last Updated : Feb 3, 2023, 8:29 PM IST