ವಿಜಯಪುರ: ಜಿಲ್ಲೆಯಲ್ಲಿ ಆಲಿಕಲ್ಲು ಮಳೆ, ಧರೆಗುರುಳಿದ ದ್ರಾಕ್ಷಿ ಬೆಳೆ - kannada top news
🎬 Watch Now: Feature Video
ವಿಜಯಪುರ: ರಾಜ್ಯದ ಕೆಲ ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಬೆನ್ನಲ್ಲೇ ಶನಿವಾರ ಜಿಲ್ಲೆಯ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದ್ದು ಸುಡು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪಿನ ವಾತಾವರಣದ ಅನುಭವ ಆಗಿದೆ. ಆದ್ರೆ ರಭಸವಾಗಿ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆ ಉದುರಿ ಬಿದ್ದಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಮತ್ತೊಮ್ಮೆ ಆಘಾತ ಆಗಿದೆ.
ಕಳೆದ ನಾಲ್ಕು ದಿನಗಳಿಂದ ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿ ಭೂವಿಗೆ ತಂಪೆರಚಿತ್ತು. ತೋಟದಲ್ಲಿ ಹಾಕಿದ್ದ ಒಣದ್ರಾಕ್ಷಿ ಸಹ ಹಾಳಾಗಿದೆ. ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಹುಬನೂರ, ಟಕ್ಕಳಕಿ, ಲೋಹಗಾಂವ, ಬಿಜ್ಜರಗಿ, ಸೋಮ ದೇವರಹಟ್ಟಿ, ಮಲಕನ ದೇವರಹಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯಿಂದ ಪಡದಲ್ಲಿದ್ದ ದ್ರಾಕ್ಷಿ ಹಾಗೂ ರ್ಯಾಕಿನಲ್ಲಿದ್ದ ಒಣದ್ರಾಕ್ಷಿ ತೊಯ್ದಿದೆ.
ಪಡದಲ್ಲಿದ್ದ ದ್ರಾಕ್ಷಿ ತೊಯ್ದಿದ್ದರಿಂದ ಸಕ್ಕರೆ ಅಂಶ ಕಡಿಮೆಯಾಗಿದ್ದು, ದರ ಕಡಿಮೆಯಾಗುವ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಒಣದ್ರಾಕ್ಷಿ ತೊಯ್ದಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿ ದರ ಕಡಿಮೆಯಾಗುವ ಆತಂಕ ಎದುರಾಗಿದೆ. ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುವ ದ್ರಾಕ್ಷಿ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು, ಹಾಳಾದ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು, ತಾಲೂಕಿನಲ್ಲಿ ಹಾಳಾದ ರೈತರ ತೋಟಗಳಿಗೆ ತೆರಳಿ ಸಮೀಕ್ಷೆ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆಹಾರ ಅರಸಿ ಬಂದಿದ್ದ ಗಂಡಾನೆ ವಿದ್ಯುತ್ ತಂತಿಗೆ ಸಿಲುಕಿ ಸಾವು: ವಿಡಿಯೋ