ವಿಜಯಪುರ: ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ - kannada top news
🎬 Watch Now: Feature Video
ವಿಜಯಪುರ: ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ. ಈ ಫಲಪುಶ್ಪದ ವಿಶೇಷವೆಂದರೆ ಸಿದ್ದೇಶ್ವರ ಶ್ರೀಗಳ ಬಾಲ್ಯದಿಂದ ಅವರ ಅಂತ್ಯದವರೆಗಿನ ಭಾವಚಿತ್ರಗಳನ್ನು ಪ್ರದರ್ಶಶಿಸಲಾಗಿದೆ. ಇದರ ಜೊತೆಗೆ ಕಲ್ಲಂಗಡಿಯಲ್ಲಿ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರ ಸೇರಿದಂತೆ ಹಲವು ಗಣ್ಯರ ಭಾವಚಿತ್ರವನ್ನು ಕೆತ್ತಲಾಗಿದೆ. ಅತಿ ಹೆಚ್ಚು ಗಮನ ಸೆಳೆದದ್ದು ಸಿದ್ದೇಶ್ವರ ಶ್ರೀಗಳ ಜ್ಞಾನ ಯೋಗಾಶ್ರಮದ ಪ್ರವರ್ಣ ಮಂಟಪ, ಬಸವಣ್ಣನ ಮೂರ್ತಿ ಸಹ ಹೂವಿನಿಂದ ನಿರ್ಮಿಸಲಾಗಿತ್ತು ಇದರ ಜೊತೆ ಜೊತೆಗೆ ಬೇರೆ ಆಕೃತಿಗಳನ್ನು ಸಹ ಹೂವು ಮತ್ತು ಹಣ್ಣಿನಿಂದ ನಿರ್ಮಿಸಲಾಗಿತ್ತು.
ಇದನ್ನೂ ಓದಿ: ನನಗೆ ಯಾವುದೇ ನೋಟಿಸ್ ಬಂದಿಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Last Updated : Feb 3, 2023, 8:39 PM IST