ಸಹ ಕೋತಿ ಸಾವಿಗೆ ಕಾರಣವೆಂದು ವ್ಯಕ್ತಿ ಮೇಲೆ ಮಂಗಗಳ ದಾಳಿ.. ವಿಡಿಯೋ ವೈರಲ್​ - Drug store manager attacked by mokeys

🎬 Watch Now: Feature Video

thumbnail

By

Published : May 22, 2023, 3:58 PM IST

Updated : May 22, 2023, 5:37 PM IST

ಮಂಚೇರಿಯಲ್(ತೆಲಂಗಾಣ) : ಸಾಮಾನ್ಯವಾಗಿ ನಮ್ಮ ಪ್ರೀತಿಪಾತ್ರರ ಸಾವಿಗೆ ಯಾರಾದರೂ ಕಾರಣ ಎಂದು ತಿಳಿದರೆ ನಾವು ಅವರೊಂದಿಗೆ ಜಗಳವಾಡುತ್ತೇವೆ ಮತ್ತು ಹಲ್ಲೆ ಮಾಡುತ್ತೇವೆ. ಪ್ರಾಣಿಗಳ ವಿಷಯಕ್ಕೆ ಬಂದರೆ, ಅಂತಹ ಘಟನೆಗಳನ್ನು ನಾವು ಅಪರೂಪವಾಗಿ ಕೇಳುತ್ತೇವೆ ಅಥವಾ ನೋಡುತ್ತೇವೆ. ಇತ್ತೀಚೆಗಷ್ಟೇ ಮಂಚೇರಿಯಲ್ ಜಿಲ್ಲೆಯಲ್ಲಿ ಇಂತಹದ್ದೇ ದೃಶ್ಯ ಕಂಡು ಬಂದಿತ್ತು. ಅಲ್ಲಿಯವರೆಗೂ ಜೊತೆಯಲ್ಲಿ ಆಟವಾಡುತ್ತಿದ್ದ ಮಂಗನ ಸಾವಿಗೆ ವ್ಯಕ್ತಿಯೊಬ್ಬರು ಕಾರಣ ಎಂದು ಭಾವಿಸಿ ಮಂಗಗಳ ಗುಂಪೊಂದು ಔಷಧ ಅಂಗಡಿಯ ಮ್ಯಾನೇಜರ್ ಮೇಲೆ ದಾಳಿ ಮಾಡಿವೆ.

ಪ್ರಾಣ ಕಳೆದುಕೊಂಡ ಕೋತಿ : ಮಂಚಿರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟೆಯಲ್ಲಿರುವ ಔಷಧ ಅಂಗಡಿಯೊಂದಕ್ಕೆ ಮಂಗವೊಂದು ನುಗ್ಗಲು ಯತ್ನಿಸಿದಾಗ ಅಂಗಡಿಯ ವ್ಯವಸ್ಥಾಪಕರು ಬಾಗಿಲು ಮುಚ್ಚಲು ಮುಂದಾಗಿದ್ದರು. ಈ ವೇಳೆ ಕೋತಿ ಅದರಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಇದನ್ನು ಗಮನಿಸಿದ ಉಳಿದ ಕೋತಿಗಳು ತಮ್ಮ ಸಹ ಕೋತಿಯ ಸಾವಿಗೆ ಕಾರಣರಾದವರ ಮೇಲೆ ದಾಳಿ ನಡೆಸಿವೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಕೋಪ, ದ್ವೇಷ, ಸೇಡು ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಐತಿಹಾಸಿಕೆ ಕೆರೆಗೆ ಚರಂಡಿ ನೀರು ಸೇರ್ಪಡೆ: ಮೀನುಗಳ ಮಾರಣಹೋಮ

Last Updated : May 22, 2023, 5:37 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.