ಗ್ಯಾಂಗ್ಸ್ಟಾರ್ ಅತೀಕ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಮುಜಾಫರ್ ಬಿಡುಗಡೆ.. ಮೆರವಣಿಗೆ..! - ಈಟಿವಿ ಭಾರತ ಕನ್ನಡ
🎬 Watch Now: Feature Video
ಪ್ರಯಾಗರಾಜ್: ಗ್ಯಾಂಗ್ಸ್ಟಾರ್ ಅತೀಕ್ ಅಹ್ಮದ್ ಹತ್ಯೆಯ ನಂತರ ಆತನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಅಂತಾರಾಜ್ಯ ದನ ಕಳ್ಳಸಾಗಣೆದಾರ ಮೊಹಮ್ಮದ್ ಮುಜಾಫರ್ ಜೈಲಿನಿಂದ ಬಿಡುಗಡೆಯಾಗಿದ್ದು, ಬ್ಲಾಕ್ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಬ್ಲಾಕ್ ಮುಖ್ಯಸ್ಥರಾಗಿ ಆಯ್ಕೆ ಯಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸಲು ಮುಜಾಫರ್ ತೆರಳಿದ್ದ ವೇಳೆ ಬೆಂಲಿಗರು ವಾಹನಗಳು ಮುಖಾಂತರ ಮೆರವಣಿಗೆ ನಡೆಸಿದರು.
ಪಂಚಾಯತ್ ಚುನಾವಣೆಯಲ್ಲಿ, ಮೊಹಮ್ಮದ್ ಮುಜಾಫರ್ ಜೈಲಿನಿಂದಲೇ ಸ್ಪರ್ಧಿಸಿ ಕೌದಿಹಾರ್ ನಿಂದ ಗೆಲುವು ಸಾಧಿಸಿದ್ದರು. ಆದರೆ, ಜೈಲಿನಲ್ಲಿರುವ ಕಾರಣ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಜಾಮೀನು ಪಡೆದ ಅವರು ಜೂನ್ 4 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗಷ್ಟೇ ಮುಜಾಫರ್ ವಿರುದ್ಧ ಒಂದು ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆ ಇಟ್ಟಿದ್ದ ಪ್ರಕರಣವೂ ದಾಖಲಾಗಿದೆ.
ಅಂದಿನಿಂದ ಮುಜಾಫರ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದಾದ ಬಳಿಕ ಮುಜಾಫರ್ ಎರಡು ದಿನಗಳ ಹಿಂದಷ್ಟೇ ಬ್ಲಾಕ್ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮುಜಾಫರ್ ವಿರುದ್ಧ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈಓ ಹಿನ್ನೆಲೆ ಮುಜಾಫರ್ಗೆ ಸಂಬಂಧಿಸಿದ 30 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಸಂಚಾರ ಪುನಾರಂಭ: ಹೇಗಿತ್ತು ದೃಶ್ಯ ವಿಡಿಯೋದಲ್ಲಿ ನೋಡಿ!