ಕಾವೇರಿ ನಿವಾಸದಲ್ಲಿ ಡಿಸಿಎಂ ಡಿಕೆಶಿ, ಕೆ.ಎನ್.ರಾಜಣ್ಣ, ಪರಮೇಶ್ವರ್ ಮಧ್ಯೆ ಸ್ವಾರಸ್ಯಕರ ಮಾತುಕತೆ - ವಿಡಿಯೋ ನೋಡಿ - ಸಚಿವರ ಜೊತೆಗಿನ ಬ್ರೇಕ್ ಫಾಸ್ಟ್ ಸಭೆ
🎬 Watch Now: Feature Video
Published : Nov 4, 2023, 4:39 PM IST
ಬೆಂಗಳೂರು: ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಜೊತೆಗಿನ ಬ್ರೇಕ್ ಫಾಸ್ಟ್ ಸಭೆ ಕೆಲ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು. ಕಾವೇರಿ ನಿವಾಸದಲ್ಲಿ ನೂತನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ ಮಾಡಲಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ಕೈಯಿಂದಲೇ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿಸಿದರು. "ಕೆಪಿಸಿಸಿ ಅಧ್ಯಕ್ಷರು ನೀವೇ ಕತ್ತರಿಸಿ" ಎಂದು ಹೇಳಿ ಟೇಪ್ ಕತ್ತರಿಸಲು ಕತ್ತರಿಯನ್ನು ಖುದ್ದು ಡಿಸಿಎಂ ಕೈಗೆ ಸಿಎಂ ಸಿದ್ದರಾಮಯ್ಯ ಕತ್ತರಿ ಕೊಟ್ಟರು. ಅಧ್ಯಕ್ಷರ ಕೈಯಿಂದ ಉದ್ಘಾಟನೆ ಆದರೆ ಪಕ್ಷಕ್ಕೆ ಒಳ್ಳೆಯದು ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.
ಈ ವೇಳೆ ಕೆ.ಎನ್.ರಾಜಣ್ಣ ಎಲ್ಲಿ ಅಂತ ಕರೆದ ಡಿಕೆಶಿ, ಪರಮೇಶ್ವರ್ ಅವರಿಗೆ ನಿನ್ನೆ ನೀವು ಸಿಎಂ ಆಗಲಿ ಅಂತ ಹೇಳಿಕೆ ನೀಡಿದ್ದಾರೆ ಎಂದು ಕಾಲೆಳೆದರು. ಆಗ ನೋಡ್ರಿ ನನ್ನನ್ನು ಹೆಂಗೆ ಕೆಣಕುತ್ತಾರೆಂದು ನಯವಾಗಿಯೇ ರಾಜಣ್ಣ ಪ್ರತಿಕ್ರಿಯಿಸಿದರು. ಕೊನೆಗೆ ಎಲ್ಲರೂ ಚಪ್ಪಾಳೆ ಹೊಡೆಯಿರಿ ಎಂದು ಹೇಳುತ್ತಾ ಕಾನ್ಫರೆನ್ಸ್ ಹಾಲ್ ಉದ್ಘಾಟನೆ ಮಾಡಿದರು.
ಕಾವೇರಿ ನಿವಾಸದಲ್ಲಿ ಡಿಕೆಶಿಯಿಂದ ದೇವರಿಗೆ ಪೂಜೆ: ಡಿಸಿಎಂ ಡಿಕೆಶಿ ಕಾವೇರಿ ನಿವಾಸದಲ್ಲಿ ನೂತನ ಸಭಾಂಗಣದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ದೇವರಿಗೆ ಮಂಗಳಾರತಿ ಎತ್ತುವ ಮುನ್ನ, ಈ ಬಾರಿ ಎಲ್ಲರಿಗೂ ಒಳ್ಳೆಯದಾಗಲಿ, 2028ರಲ್ಲೂ ಜಯಭೇರಿ ಗಳಿಸುವ ಶಕ್ತಿ, ಭಾಗ್ಯ ನಿಮಗೆಲ್ಲರಿಗೂ ಸಿಗಲಿ ಎಂದು ಹಾರೈಸಿದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯದಾಗಲಿ ಎಂದು ಸಚಿವರು ಹಾರೈಸಿದರು.
ಇದನ್ನೂ ಓದಿ: ನಾನೂ ಸೇರಿದಂತೆ ಸಚಿವರುಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್