ಮರಾಠಿಗರಿಗೆ ಮೇಯರ್-ಉಪಮೇಯರ್ ಪಟ್ಟ: ವಾಟಾಳ್ ಆಕ್ರೋಶ
🎬 Watch Now: Feature Video
ಮೈಸೂರು: ಬೆಳಗಾವಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯವರು ಮರಾಠಿಗರನ್ನು ಆಯ್ಕೆ ಮಾಡಿ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬುಧವಾರ ಪ್ರತಿಭಟನೆ ನಡೆಸಿದರು. ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಅವರು, "ರಾಜ್ಯದ ಬಿಜೆಪಿಯವರು ಚುನಾವಣೆಗಾಗಿ ಮರಾಠಿಗರಿಗೆ ಬೆಳಗಾವಿಯ ಮೇಯರ್ ಹಾಗೂ ಉಪಮೇಯರ್ ಸ್ಥಾನ ನೀಡಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಭಾಷೆಗೆ ಅಪಮಾನ ಮಾಡಿದ್ದಾರೆ" ಎಂದು ಕಿಡಿ ಕಾರಿದರು.
"ಮರಾಠಿಗರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಚುನಾವಣೆಗೆ ಕನ್ನಡವನ್ನು ಬಲಿ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಇದರಿಂದ ಎಂಎಎಸ್ ಪುಂಡಾಟಿಕೆ ಅತಿರೇಕವಾಗಿದೆ. ಮರಾಠಿಗರಿಗೆ ನೇರವಾಗಿ ಬಿಜೆಪಿಯವರು ಬೆಂಬಲ ಕೊಟ್ಟಂತಾಗಿದೆ. ಬಿಜೆಪಿಯವರು ಅಧಿಕಾರಕ್ಕಾಗಿ ಇಂತಹ ಕೆಲಸ ಮಾಡಬಾರದು" ಎಂದು ಆಕ್ರೋಶ ಹೊರಹಾಕಿದರು. "ಮೈಸೂರು- ಬೆಂಗಳೂರು ರಾಷ್ಟ್ರೀಯ ದಶಪಥ ರಸ್ತೆಗೆ ಕನ್ನಡ ತಾಯಿ ಭುವನೇಶ್ವರಿಯ ಹೆಸರು ಇಡಬೇಕು. ಇದರಿಂದ ಕನ್ನಡಿಗರ ಗೌರವ ಹೆಚ್ಚಾಗಲಿದೆ" ಎಂದರು.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಪಿವೈ ಚಾಲನೆ