ಸಿದ್ದರಾಮಯ್ಯಗೆ ಕೋಲಾರಕ್ಕಿಂತ ವರುಣಾ ಸುರಕ್ಷಿತ ಕ್ಷೇತ್ರ: ಕೆ ಎನ್ ರಾಜಣ್ಣ - ವರುಣಾ ಸುರಕ್ಷಿತ ಕ್ಷೇತ್ರ
🎬 Watch Now: Feature Video
ತುಮಕೂರು: ಸಿದ್ದರಾಮಯ್ಯ ಅವರಿಗೆ ಕೋಲಾರಕ್ಕಿಂತ ವರುಣಾ ಸುರಕ್ಷಿತ ಕ್ಷೇತ್ರ. ಅಲ್ಲಿ ಸ್ಪರ್ಧಿಸಿದರೆ ಸಿದ್ದರಾಮಯ್ಯಗೆ ಒಳಿತು ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರಿಗೆ ಬೇರೆ ಅವಕಾಶ ಕಲ್ಪಿಸಬಹುದು. ವರುಣಾ ಅವರಿಗೆ ಸುರಕ್ಷಿತ ಕ್ಷೇತ್ರ ಅನ್ನೋದು ನನ್ನ ಭಾವನೆ. ಸುರಕ್ಷಿತ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ನಾನು ಮನವಿ ಮಾಡುತ್ತೇನೆ ಎಂದರು.
ವರುಣಾದಲ್ಲಿ ಸ್ಪರ್ಧೆ ಮಾಡಿದರೆ ಅವರಿಗೆ ಸಮಯ ಉಳಿತಾಯವಾಗುತ್ತದೆ. ಬೇರೆ ಕ್ಷೇತ್ರದಲ್ಲಿ ಓಡಾಡಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲು ಸಮಯ ಸಿಗುತ್ತದೆ. ಕೋಲಾರದಲ್ಲಿ ಪರಮೇಶ್ವರರನ್ನು ಸಿದ್ದರಾಮಯ್ಯ ಸೋಲಿಸಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕೆಲವರು ಕರಪತ್ರ ಹಂಚುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕಾಂಗ್ರೆಸ್ನ ಯಾವ ಅಭ್ಯರ್ಥಿಗೂ ವಿರೋಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊರಟಗೆರೆಯಲ್ಲಿ ಸಿದ್ದರಾಮಯ್ಯ ಅವರ ಸಮುದಾಯದವರು ವಿರೋಧ ವ್ಯಕ್ತಪಡಿಸುವ ಸಂದರ್ಭ ಬರಬಹುದು. ಹಾಗಾಗಿ ಒಬ್ಬರಿಗೊಬ್ಬರು ಈ ರೀತಿ ಮಾಡಬಾರದು. ಅಥವಾ ಎರಡೂ ಕ್ಷೇತ್ರ ಬಿಟ್ಟು ಮಧುಗಿರಿಗೆ ಬರಲಿ. ಮಧುಗಿರಿಯಲ್ಲಿ ನಿಂತರೆ ನಮ್ಮ ಹೆಮ್ಮೆ. ಇಲ್ಲಿಯ ಜನತೆ ಸಿದ್ದರಾಮಯ್ಯ ಅರನ್ನು ಗೆಲ್ಲಿಸುತ್ತಾರೆ. ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅದು ನಮಗೆ ಹೆಮ್ಮೆ ಎಂದರು.