ವರ್ತೂರು ಸಂತೋಷ್ ಬಿಡುಗಡೆ: ಆತ್ಮೀಯವಾಗಿ ಬರಮಾಡಿಕೊಂಡ ಕುಟುಂಬಸ್ಥರು, ಬೆಂಬಲಿಗರು - ಕಾನೂನು ಹೋರಾಟ
🎬 Watch Now: Feature Video
Published : Oct 27, 2023, 9:53 PM IST
ಆನೇಕಲ್: ಹುಲಿ ಉಗುರು ಹೊಂದಿದ್ದ ಆರೋಪದಡಿ ಜೈಲು ಪಾಲಾಗಿದ್ದ ವರ್ತೂರು ಹಳ್ಳಿಕಾರ್ ಖ್ಯಾತಿಯ ಸಂತೋಷ್ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಹೊರಬಂದಿದ್ದಾರೆ. ಅಭಿಮಾನಿಗಳು ಹಾಗೂ ಕುಟುಂಬಸ್ಥರು ಸಂಭ್ರಮದಿಂದ ಸಂತೋಷ್ ಅವರನ್ನು ಬರಮಾಡಿಕೊಂಡರು. ಹೂ ಹಾರ ಹಾಕಿ, ಮೈಸೂರು ಪೇಟ ಧರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಅ. 22ರಂದು ಬಂಧನಕ್ಕೊಳಗಾಗಿ ಇದೀಗ ಐದು ದಿನಗಳ ನಂತರ ಜೈಲಿನಿಂದ ಷರತ್ತುಬದ್ದ ಜಾಮೀನಿನ ಮೂಲಕ ಸಂತೋಷ್ ರಿಲೀಸ್ ಆಗಿದ್ದಾರೆ.
ಸಂತೋಷ್ ಪರ ವಕೀಲ ನಟರಾಜ್ ಮಾತನಾಡಿ, "ಇದೊಂದು ಷಡ್ಯಂತ್ರ ಎಂದು ತೋರುತ್ತದೆ. ಸಮನ್ಸ್ ಪ್ರಕರಣ. ಕನಿಷ್ಟ ಏಳು ವರ್ಷಗಳ ಸಜಾ ಒಳಪಟ್ಟ ಪ್ರಕರಣದಲ್ಲಿ ಮೊದಲು ಸೂಚನೆ ನೀಡಿ, ನಂತರ ಬಂಧಿಸಬೇಕಿತ್ತು. ಏಕಾಏಕಿ ಬಂಧಿಸಿ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಒಂದು ವ್ಯವಸ್ಥಿತ ಸುಳ್ಳು ಕೇಸ್. ಇದರಲ್ಲಿ ಅಷ್ಟು ಆತುರಾತುರವಾಗಿ ಅರಣ್ಯಾಧಿಕಾರಿಗಳು ತೆಗೆದುಕೊಂಡ ಕ್ರಮದ ವಿರುದ್ದ ಸಂತೋಷ್ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗುತ್ತದೆ" ಎಂದರು.
"ಮಗ ಗೆಲ್ಲಲೇಬೇಕು. ಬಿಗ್ಬಾಸ್ಗೆ ಮರಳಿ ಹೋಗುವ ಅಥವಾ ಮನೆಯಲ್ಲೇ ಇದ್ದು ವ್ಯವಹಾರ ನೋಡಿಕೊಳ್ಳುವ ಕುರಿತು ಆತ ನಿರ್ಧರಿಸಬೇಕು. ಕುಳಿತು ಮಾತನಾಡಿ ಮುಂದಿನ ನಡೆ ತಿಳಿಸುತ್ತೇವೆ" ಎಂದು ಸಂತೋಷ್ ತಂದೆ ಹೇಳಿದರು.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಪ್ರಕರಣ: ವರ್ತೂರು ಸಂತೋಷ್ಗೆ ಷರತ್ತುಬದ್ಧ ಜಾಮೀನು ಮಂಜೂರು