2028ರ ನಂತರ ಹಾವೇರಿ ಜಿಲ್ಲೆಯಲ್ಲಿ ಮೂರ್ನಾಲ್ಕು ಮಂದಿ ಮಹಿಳಾ ಶಾಸಕಿಯರೇ ಇರುತ್ತಾರೆ: ವಚನಾನಂದ ಸ್ವಾಮೀಜಿ - etv bharat karnataka
🎬 Watch Now: Feature Video
Published : Oct 28, 2023, 8:48 AM IST
ಹಾವೇರಿ: 2028ರ ನಂತರ ನಡೆಯುವ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಮಂದಿ ಮಹಿಳಾ ಶಾಸಕಿಯರೇ ಇರುತ್ತಾರೆ ಎಂದು ಹರಿಹರ ಪಂಚಮಸಾಲಿಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ಹಾವೇರಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಬಸವಣ್ಣನವರ ಕಾಲದ 770 ವಚನಕಾರರಲ್ಲಿ 33 ಜನ ವಚನಗಾರ್ತಿಯರು ಇದ್ದರು ಎಂದರು.
ಪ್ರಸ್ತುತ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ನಿಗದಿ ಮಾಡಿದೆ. ಆದಷ್ಟು ಬೇಗ ಮಹಿಳಾ ಮೀಸಲಾತಿ ಜಾರಿಗೆ ಬರಲಿ. ಈ ಮೂಲಕ ಎಲ್ಲ ಕಡೆ ನಮ್ಮ ತಾಯಂದಿರು ಮುಂದೆ ಬರುವಂತೆ ಆಗಬೇಕು, ಇದರಿಂದ ಸಮಸಮಾಜ ನಿರ್ಮಾಣ ಆಗಲು ಸಾಧ್ಯ. ಇದು ಬಸವಾದಿ ಶರಣರ ಕಲ್ಪನೆ ಎಂದು ಹೇಳಿದರು.
ಇದಕ್ಕೂ ಮೊದಲು ವಚನಾನಂದ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಾವೇರಿ ಶಾಸಕ, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ
ವಹಿಸಿದ್ದರು.
ಇದನ್ನೂ ಓದಿ: ಚನ್ನಮ್ಮನ ಕಿತ್ತೂರು ಉತ್ಸವ, ರಾಷ್ಟ್ರೀಯ ಉತ್ಸವ ಆಗಲಿ: ಕೂಡಲಸಂಗಮ ಮತ್ತು ಕಲ್ಮಠ ಸ್ವಾಮೀಜಿಗಳ ಕರೆ