ಮಂಡ್ಯ: ರಾತ್ರೋರಾತ್ರಿ 'ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ' ತೆರವು - ಬಾಲಗಂಗಾಧರ ನಾಥ ದ್ವಾರ
🎬 Watch Now: Feature Video
ಮಂಡ್ಯ: ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಮಿಸಿದ್ಧ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಮಹಾದ್ವಾರವನ್ನು ಕಳೆದ ರಾತ್ರಿ ತೆರವು ಮಾಡಲಾಗಿದೆ. ಈ ದ್ವಾರ ತೀವ್ರ ಟೀಕೆಗೆ ಗುರಿಯಾಗಿತ್ತು. ತೆರವುಗೊಳಿಸಲಾದ ಸ್ಥಳದಲ್ಲಿ ಶ್ರೀ ಬಾಲಗಂಗಾಧರನಾಥ ದ್ವಾರವನ್ನು ನಿಲ್ಲಿಸಲಾಗಿದೆ. ಮಂಡ್ಯದ ಫ್ಯಾಕ್ಟರಿ ವೃತ್ತದ ಬಳಿಯಿದ್ದ ನೂತನ ದ್ವಾರದ ಮೂಲಕ ಪ್ರಧಾನಿಗೆ ಸ್ವಾಗತ ಕೋರಲು ಬಿಜೆಪಿಗರು ಸಜ್ಜಾಗಿದ್ದರು. ಕೋಮು ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಮೊದಲ ಬಾರಿಗೆ ಸಕ್ಕರೆ ನಾಡಿಗೆ ಪ್ರಧಾನಿ ಆಗಮಿಸುತ್ತಿದ್ದು ಸ್ವಾಗತ ನೀಡಲು ಕಮಲ ಪಾಳಯ ಭಾರಿ ಸಿದ್ಧತೆ ನಡೆಸಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೇಸರಿಮಯವಾಗಿದೆ. ಮೋದಿ ರ‍್ಯಾಲಿ ಆರಂಭವಾಗಲಿರುವ ಐಬಿ ಸರ್ಕಲ್ನಿಂದ 1.8 ಕಿ.ಮೀ ವರೆಗೂ ರಸ್ತೆಯ ಎರಡು ಬದಿ ಬ್ಯಾರಿಗೇಟ್ ಅಳವಡಿಸಲಾಗಿದೆ. ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ಫ್ಲೆಕ್ಸ್ ಹಾಗೂ ಬ್ಯಾನರ್ಗಳಿಂದ ತುಂಬಿದೆ.
ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ ನಂದಾ ವೃತ್ತದವರೆಗೆ 1.8 ಕಿ.ಮೀ ರೋಡ್ ಶೋ ನಡೆಯಲಿದೆ. ಶೋ ವೀಕ್ಷಣೆ ಮಾಡಲು 50 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಸರ್.ಎಂ ವಿಶ್ವೇಶ್ವರಯ್ಯ ಪ್ರತಿಮೆ ಮಹಾದ್ವಾರದಲ್ಲಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಐಬಿ ವೃತ್ತದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರಿಗೆ ಬಂದಿಳಿದ ಪ್ರಧಾನಿ ಮೋದಿ: ಮಂಡ್ಯದತ್ತ ಪ್ರಯಾಣ