ಬೈಕ್​ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಓರ್ವ ವ್ಯಕ್ತಿ ಸಾವು, ನಾಲ್ವರಿಗೆ ಗಾಯ - ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಕಾರು ಅಪಘಾತ

🎬 Watch Now: Feature Video

thumbnail

By ETV Bharat Karnataka Team

Published : Nov 7, 2023, 7:31 PM IST

ಚಿಂದ್ವಾರಾ (ಮಧ್ಯಪ್ರದೇಶ): ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರ ಕಾರು ಅಪಘಾತಕ್ಕೀಡಾಗಿದೆ. ಛಿಂದ್ವಾರದ ಅಮರವಾಡದಿಂದ ರೋಡ್ ಶೋ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಸಿಂಗೋಡಿ ಬೈಪಾಸ್‌ನ ಖಾಕ್ರಾ ಚೌರೈ ಬಳಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಕೇಂದ್ರ ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜತೆಗೆ ಇನ್ನೂ ನಾಲ್ಕೈದು ಮಂದಿ ಗಾಯಗೊಂಡಿದ್ದು, ಬೈಕ್​​ ಸವಾರ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಬೈಕ್​ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಮಾಹಿತಿ ಪ್ರಕಾರ, ಅಮರವಾಡದಲ್ಲಿ ಶಾಲೆಯಿಂದ ವಾಹನ ಸವಾರ ತನ್ನ ಮಕ್ಕಳನ್ನು ಕರೆದುಕೊಂಡ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ, ಬೈಪಾಸ್​ ರಸ್ತೆಯಲ್ಲಿ ದಿಢೀರ್​ ಆಗಿ ದ್ವಿಚಕ್ರ ವಾಹನ ಅಡ್ಡ ಬಂದ ಪರಿಣಾಮ ವಾಹನಕ್ಕೆ ಸಚಿವರ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿದ್ದು, ಆತನ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಸಚಿವರ ಕಾರು ರಸ್ತೆಯಿಂದ ಕೆಳಗಿಳಿದಿದ್ದು, ಕಾರಿನಲ್ಲಿದ್ದ ಏರ್​ಬ್ಯಾಗ್​ ಓಪನ್​ ಆಗಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಎಸ್ಪಿ ಅವಧೇಶ್​ ಪ್ರತಾಪ್​ ಸಿಂಗ್ ತಿಳಿಸಿದ್ದಾರೆ.​ ಜತೆಗೆ ಸಚಿವರ ಮಾಧ್ಯಮ ಸಲಹೆಗಾರ ನಿತಿನ್ ತ್ರಿಪಾಠಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇದನ್ನೂ ಓದಿ: ಕಲಬುರಗಿಯಲ್ಲಿ ಬೈಕ್​-ಲಾರಿ ಮುಖಾಮುಖಿ ಡಿಕ್ಕಿ: ನವವಿವಾಹಿತೆ ಸೇರಿ ನೇಪಾಳ ಮೂಲದ ಒಂದೇ ಕುಟುಂಬದ ಐವರ ಸಾವು

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.