ನಾಲ್ಕು ಪಥದ ಮುಂಬೈ - ಗೋವಾ ಹೆದ್ದಾರಿ ಸೇತುವೆ ಕುಸಿತ: ಭಯಾನಕ ವಿಡಿಯೋ
🎬 Watch Now: Feature Video
ಮುಂಬೈ( ಮಹಾರಾಷ್ಟ್ರ): ಮುಂಬೈ- ಗೋವಾ ಚತುಷ್ಪಥ ಹೆದ್ದಾರಿಯ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಮಹಾರಾಷ್ಟ್ರದ ಚಿಪ್ಲುನ್‌ನಲ್ಲಿ ಸೋಮವಾರ ಕುಸಿದು ಬಿದ್ದಿದೆ. ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಸೇತುವೆ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದು ಮಹಾರಾಷ್ಟ್ರದ ದೊಡ್ಡ ರಸ್ತೆ ಸೇತುವೆಯಾಗಿದೆ. ಮುಂಬೈ- ಗೋವಾ ಹೆದ್ದಾರಿಗೆ ನಾಲ್ಕು ಲೇನ್ನ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಕಾಮಗಾರಿ ನಡೆಯುತ್ತಿರುವ ವೇಳೆಯೇ ಅದು ನೆಲಸಮವಾಗಿದೆ. ಮೊದಲು ಒಂದು ಪಿಲ್ಲರ್ ಕುಸಿಯಿತು. ಬಳಿಕ ಬಳಿಕ ಸಾಲಾಗಿ ಸೇತುವೆ ಕುಸಿಯುತ್ತಿರುವುದು ವಿಡಿಯೋದಲ್ಲಿದೆ. ಸೇತುವೆ ಮೇಲೆ ಕ್ರೇನ್ ಯಂತ್ರಕ್ಕೂ ಕೂಡ ಹಾನಿಯಾಗಿದೆ.
ದುರಂತದ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಜೀವಹಾನಿ ಸಂಭವಿಸಿಲ್ಲ. ಸೇತುವೆ ಕುಸಿತ ಸುದ್ದಿ ಕೇಳಿ ಸುರಕ್ಷತಾ ಎಂಜಿನಿಯರ್ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಹೊಸ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ತಿಂಗಳ ಹಿಂದೆ ಮುಂಬೈ-ಗೋವಾ ಹೆದ್ದಾರಿಯ ಫ್ಲೈಓವರ್ ಕೂಡ ನಾಶವಾಗಿತ್ತು. ದೈತ್ಯ ಸೇತುವೆಯ ಕೆಲ ಭಾಗ ಮುರಿದು ಬಿದ್ದಿದ್ದರಿಂದ ಮುಂಬೈ - ಗೋವಾ ಹೆದ್ದಾರಿಯಲ್ಲಿ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿತ್ತು.
ಇದನ್ನೂ ಓದಿ: ಕೊಪ್ಪಳದಲ್ಲಿ 'ಬರ' ಸಿಡಿಲು: ಬೆಳೆ ಸಂರಕ್ಷಣೆಗೆ ಟ್ಯಾಂಕರ್ ನೀರಿನ ಮೊರೆ ಹೋದ ರೈತರು