ಟೋಲ್ ಕಟ್ಟದೆ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷನ ದರ್ಪ; ಗೇಟ್ ಮುರಿದು ಪರಾರಿ- ವಿಡಿಯೋ - ETV Bharat Karnataka
🎬 Watch Now: Feature Video
Published : Oct 10, 2023, 10:57 PM IST
ಮಂಡ್ಯ : ಟೋಲ್ ಕಟ್ಟಲು ನಿರಾಕರಿಸಿದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ, ಟೋಲ್ ಸಿಬ್ಬಂದಿ ಜೊತೆಗೆ ಗಲಾಟೆ ಮಾಡಿ ಟೋಲ್ನ ಗೇಟ್ ಮುರಿದು ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ನಲ್ಲಿ ಇಂದು ನಡೆಯಿತು.
ನಾನು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ, ಟೋಲ್ ಕಟ್ಟಲ್ಲ ಎಂದು ಟೋಲ್ ಸಿಬ್ಬಂದಿ ಜೊತೆ ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಹೆದ್ದಾರಿ ಟೋಲ್ ಕಟ್ಟಲೇ ಬೇಕೆಂದು ಸಿಬ್ಬಂದಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಕಾರು ರಿವರ್ಸ್ ತೆಗೆದು ವೇಗವಾಗಿ ಬಂದು ಟೋಲ್ ಗೇಟ್ಗೆ ಗುದ್ದಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಗೇಟ್ ಜಖಂಗೊಳಿಸಿ ಪರಾರಿಯಾದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷನ ವಿರುದ್ದ ಟೋಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ರೋಡ್ ರೇಜ್ ಗಲಾಟೆ ಹೆಚ್ಚಳ: ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಾಲ್ವರ ವಿರುದ್ಧ ರೌಡಿಪಟ್ಟಿ ಓಪನ್