ಕ್ರಿಕೆಟ್ ಪಂದ್ಯಾವಳಿ ವೇಳೆ ತಪ್ಪು ತೀರ್ಪು ಕೊಟ್ಟರೆಂದು ಅಂಪೈರ್ ಹತ್ಯೆಗೈದ ಯುವಕ! - cricket tournament
🎬 Watch Now: Feature Video
ಕಟಕ್ (ಒಡಿಶಾ): ಕಟಕ್‌ನ ಚೌದ್ವಾರ್‌ನಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂಪೈರ್ ಕೊಲೆಯಾಗಿದ್ದಾರೆ. ಮಹಿಸಳಂದ ಗ್ರಾಮದ ಲಕ್ಕಿ ರಾವುತ್ (22) ಮೃತರೆಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಏನಾಯ್ತು?: ಚೌದ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಸಳಂದ ಗ್ರಾಮದಲ್ಲಿ ಭಾನುವಾರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಎರಡು ಸ್ಥಳೀಯ ಗ್ರಾಮಗಳಾದ ಬರ್ಹಾಂಪುರ ಮತ್ತು ಶಂಕರಪುರದ ಯುವಕರ ತಂಡಗಳು ಆಡುತ್ತಿದ್ದವು. ಈ ಸಂದರ್ಭದಲ್ಲಿ ಅಂಪೈರ್ ನೀಡಿದ ನಿರ್ಧಾರ ತಪ್ಪು ಎಂದು ಅದೇ ಗ್ರಾಮದ ಸ್ಮೃತಿ ರಂಜನ್ ರೌತ್ ಎಂಬಾತ ಕೋಪಗೊಂಡು ವಾಗ್ವಾದಕ್ಕಿಳಿದಿದ್ದಾನೆ. ಬಳಿಕ ಲಕ್ಕಿ ರಾವುತ್ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಲಕ್ಕಿಯನ್ನು ಎಸ್‌ಸಿಬಿ ಮೆಡಿಕಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಮಗು, ಮಹಿಳೆ ಸೇರಿ ಮೂವರ ಶವ ಹಳಿಯಲ್ಲಿ ಪತ್ತೆ