ಅಪರೂಪದ ಸುಳಿಗಾಳಿ, ಪ್ರಾಕೃತಿಕ ವಿದ್ಯಮಾನ ಕಂಡು ಬೆಚ್ಚಿ ಬಿದ್ದ ಜನ : ವೈರಲ್​ ವಿಡಿಯೋ - phenomena

🎬 Watch Now: Feature Video

thumbnail

By

Published : Jan 28, 2023, 9:35 PM IST

Updated : Feb 3, 2023, 8:39 PM IST

ಉಡುಪಿ: ಕಾರ್ಕಳದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿದೆ. ಈ ಪ್ರಾಕೃತಿಕ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿಯು ಕಾಣಿಸಿಕೊಂಡಿದ್ದು, ಸುರಳಿ ಆಕಾರದಲ್ಲಿ ಧೂಳು, ಮುಗಿಲೆತ್ತರಕ್ಕೆ ಚಿಮ್ಮಲು ಪ್ರಾರಂಭಿಸಿದೆ. ಈ ವೇಳೆ, ಧೂಳಿನ ಜೊತೆಗೆ ಮೈದಾನದಲ್ಲಿದ್ದ ಕಸ ಗಿಡಗಂಟಿಗಳನೆಲ್ಲ ಹೊತ್ತು ಮೇಲಿರಿತು. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು. ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದು, ಈ ಭಾಗದಲ್ಲಿ ಹಿಂದೆಯೂ ಇದೇ ರೀತಿಯ ಸುಳಿಗಾಳಿ ಕಂಡುಬಂದಿತ್ತು. ಕಾರ್ಕಳ, ಮೂಡುಬಿದರೆ, ಅಜೇಕಾರು, ಬೆಳಪು ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಸುಳಿಗಾಳಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧಗ ಧಗನೇ ಹೊತ್ತಿ ಉರಿದ ಕಾರು - ವಿಡಿಯೋ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.