ಹೊಸಕೋಟೆ: ರೈತರ ತೋಟಗಳಿಗೆ ಕನ್ನ ಹಾಕುತ್ತಿದ್ದ ಖದೀಮರ ಬಂಧನ; 12 ಟ್ರಾಕ್ಟರ್ ವಶಕ್ಕೆ - ಹೊಸಕೋಟೆ ಪೊಲೀಸರು ಕಾರ್ಯಾಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/31-07-2023/640-480-19140417-thumbnail-16x9-yyy.jpg)
ಹೊಸಕೋಟೆ (ಬೆಂಗಳೂರು ಗ್ರಾಮಾಂತರ) : ರೈತರ ತೋಟಗಳಿಗೆ ಕನ್ನ ಹಾಕಿ ಟ್ರ್ಯಾಕ್ಟರ್ಗಳನ್ನು ಕದಿಯುತ್ತಿದ್ದ ಖದೀಮರನ್ನು ಹೊಸಕೋಟೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಕೋಲಾರ ಮೂಲದ ಶಿವಾನಂದ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಬಂಧಿತರು ರಾತ್ರಿ ವೇಳೆ ಜಮೀನಿಗೆ ನುಗ್ಗಿ ಟೊಮೆಟೊ, ತರಕಾರಿ ಹಾಗೂ ಟ್ರಾಕ್ಟರ್ಗಳನ್ನು ಕದಿಯುತ್ತಿದ್ದರು.
ಬಂಧಿತ ಆರೋಪಿಗಳು ಚಿಂತಾಮಣಿ, ಕೋಲಾರ, ಹೊಸಕೋಟೆ ಸುತ್ತಮುತ್ತ ಕಳ್ಳತನ ಮಾಡಿದ್ದರು. ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಖದೀಮರು ಟೊಮೆಟೊ ಬೆಳೆ ಟಾರ್ಗೆಟ್ ಮಾಡಿದ್ದರು. ಇದರ ಜೊತೆಗೆ ರೈತರ ಟ್ರಾಕ್ಟರ್ಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಬಳಿಕ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.
ಈ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧೆಡೆ ಕದ್ದಿರುವ 12 ಟ್ರಾಕ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಇದನ್ನೂ ಓದಿ : Tomato Truck missing: ಕೋಲಾರದಿಂದ ಜೈಪುರಕ್ಕೆ 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ನಾಪತ್ತೆ!