ಚಾಮರಾಜನಗರ: ಒಬ್ಬ ವಿದ್ಯಾರ್ಥಿಯೂ ಇಲ್ಲದ ಶಾಲೆಗೆ ಇಬ್ಬರು ಶಿಕ್ಷಕರು - ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ಚಾಮರಾಜನಗರ: ರಾಜ್ಯದ ಹಲವು ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿರುವುದು ಒಂದು ಕಡೆಯಾದರೆ. ಒಬ್ಬ ವಿದ್ಯಾರ್ಥಿಯೂ ಇಲ್ಲದ ಸರ್ಕಾರಿ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಯಳಂದೂರು ತಾಲೂಕಿನ ದಾಸನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ ಇದಾಗಿದೆ. ಇಲ್ಲಿ ಒಂದರಿಂದ ಐದನೇ ತರಗತಿವರೆಗೆ ಮಕ್ಕಳು ಕಲಿಯಬಹುದಾಗಿದೆ. 13 ಮಕ್ಕಳಲ್ಲಿ ಐವರು ಐದನೇ ತರಗತಿ ಪಾಸಾಗಿದ್ದು ಉಳಿದ 8 ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ, ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಾಲಕರು ಆರೋಪಿಸಿ ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದಾರೆ. ಈಗ ಶಾಲೆಗೆ ಮತ್ತೋರ್ವ ಶಿಕ್ಷಕ ವರ್ಗಾವಣೆ ಆಗಿ ಬಂದಿದ್ದು ಶೂನ್ಯ ಮಕ್ಕಳ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಈ ಸಂಬಂಧ ಡಿಡಿಪಿಐ ಮಲ್ಲೇಶ್ವರಿ ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೂಡಲೇ ಪಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸಲಿದ್ದು ಆರೋಪ ಕೇಳಿಬಂದ ಶಿಕ್ಷಕರನ್ನು ಡೆಪ್ಯೂಟೇಷನ್ ಮೂಲಕ ಬೇರೆಡೆ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ರೂಬಿಕ್ಸ್ ಕ್ಯೂಬ್ ಬಿಡಿಸುವಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ 6 ವರ್ಷದ ಬಾಲಕಿ
TAGGED:
ಯಳಂದೂರು ತಾಲೂಕಿನ ದಾಸನಹುಂಡಿ