ಅಸ್ಸೋಂ ಸಿಲ್ಚಾರ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ..! - ತನಿಖೆ ಆರಂಭ
🎬 Watch Now: Feature Video
ಕ್ಯಾಚಾರ್ (ಅಸ್ಸೋಂ) : ಸಿಲ್ಚಾರ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ. ಹೌದು, ಬುಧವಾರ ರಾತ್ರಿ ಜೈಲಿನ ಗೋಡೆಯ ಕೆಳಗೆ ಸುರಂಗ ತೋಡಿ ಇಬ್ಬರು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಇಬ್ಬರು ಕೈದಿಗಳೆಂದರೆ, ದೀಪ್ ನುನಿಸಾ ಮತ್ತು ಹಿಫ್ಜುರ್ ರೆಹಮಾನ್. ಕೊಲೆ ಮಾಡಿದ ಆರೋಪದಲ್ಲಿ ಇಬ್ಬರು ಕೈದಿಗಳನ್ನು ಜೈಲಿಗೆ ಹಾಕಲಾಯಿತು. ಡಿಪ್ ನುನಿಶಾ ಅವರ ಮನೆ ಸಿಲ್ಚಾರ್‌ನ ಗುಂಗೂರ್‌ನಲ್ಲಿದೆ ಹಾಗೂ ಹಿಫ್ಜುರ್ ರೆಹಮಾನ್ ಅವರ ಮನೆ ಕರೀಮ್‌ಗಂಜ್ ಜಿಲ್ಲೆಯ ಬಂಗಾ ಪ್ರದೇಶದಲ್ಲಿದೆ.
ಇದನ್ನೂ ಓದಿ: ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್; ಸ್ಥಳದಲ್ಲೇ ಮೂವರು ಸಾವು..!
ಭದ್ರತಾ ಕಾರಣಗಳಿಗಾಗಿ ಹಿಫ್ಜುರ್ ರೆಹಮಾನ್ ಅವರನ್ನು ಇತ್ತೀಚೆಗೆ ಕರೀಂಗಂಜ್ ಜಿಲ್ಲಾ ಕಾರಾಗೃಹದಿಂದ ಸಿಲ್ಚಾರ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಕ್ಯಾಚಾರ್ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಸಿಲ್ಚಾರ್ ಜೈಲಿಗೆ ಧಾವಿಸಿ ತನಿಖೆ ಆರಂಭಿಸಿದರು. ತಲೆಮರೆಸಿಕೊಂಡಿರುವ ಇಬ್ಬರು ಕೈದಿಗಳ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ.
ಇದನ್ನೂ ಓದಿ: ಫೋಮ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರು ಸಾವು, 6 ಮಂದಿಯ ಸ್ಥಿತಿ ಗಂಭೀರ