ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು - ಈಟಿವಿ ಭಾರತ ಕನ್ನಡ
🎬 Watch Now: Feature Video
ತಿರುವಣ್ಣಾಮಲೈ (ತಮಿಳುನಾಡು): ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಸ್ಥಾನದ ಚಿತ್ರ ಪೌರ್ಣಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಆಂಧ್ರ ಮೂಲದ ಯಾತ್ರಾರ್ಥಿಗಳ ಕಾರು ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಅಪಘಾತದಲ್ಲಿ ವೆಂಕಟ ರೆಡ್ಡಿ (61) ಮತ್ತು ಶೇಖರ್ ರೆಡ್ಡಿ(55) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೋನಿಕಾ ಮತ್ತು ಮಧುಮಿತ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶದ ರಾಜಮಂಡ್ರಿ ಸಮೀಪದ ಕೊರಲಂಪೆಟ್ಟಾದಿಂದ ಈ ನಾಲ್ವರು ತಿರುವಣ್ಣಾಮಲೈ ದೇವಸ್ಥಾನದಲ್ಲಿನ ಗಿರಿವಾಲಂ ಜಾತ್ರೆ ಆಗಮಿಸಿದ್ದರು. ಜಾತ್ರೋತ್ಸವ ಮುಗಿಸಿ ನಿನ್ನೆ (ಮೇ 5) ರಾತ್ರಿ ವೆಲ್ಲೂರು ಮೂಲಕ ಆಂಧ್ರ ಪ್ರದೇಶಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ಅರಣಿ ಬಳಿಯ ಅಯ್ಯಂಪಾಲಯಂ ಬಳಿ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಕಾರು ಮಿನಿ ಬಸ್ಗೆ ಡಿಕ್ಕಿಯಾಗಿದೆ.
ಈ ವೇಳೆ ಕಾರು ಚಲಾಯಿಸುತ್ತಿದ್ದ ಶೇಖರ ರೆಡ್ಡಿ ಮತ್ತು ಸಹ ಪ್ರಯಾಣಿಕ ವೆಂಕಟರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಇಬ್ಬರನ್ನು ವೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಮಿನಿ ಬಸ್ನಲ್ಲಿದ್ದ ಒಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ 22 ಮಂದಿ ಪ್ರಯಾಣಿಸುತ್ತಿದ್ದರು. ಕನ್ನಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅದ್ದೂರಿಯಾಗಿ ನಡೆದ ಮಣ್ಣೂರು ಯಲ್ಲಮ್ಮ ದೇವಿ ಜಾತ್ರೆ - ವಿಡಿಯೋ