ಎರಡು ಕಡೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆಗಳು: ವಿಡಿಯೋ - ಮೈಸೂರಿನಲ್ಲಿ ಚಿರತೆಗಳ ದಾಳಿ
🎬 Watch Now: Feature Video
ಮೈಸೂರು: ಜಿಲ್ಲೆಯ ವಿವಿಧಡೆ ಎರಡು ಚಿರತೆಗಳು ಬೋನಿಗೆ ಬಿದ್ದ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಬೂದಹಳ್ಳಿ ಗ್ರಾಮದ ಅನ್ವರ್ ಸಾಹೇಬ್ ಎಂಬುವವರ ತೋಟದಲ್ಲಿ ಇರಿಸಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗಿದ್ದರೆ, ಮತ್ತೊಂದು ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಜಾಫರ್ ಬೇಗ್ ಎಂಬುವವರ ಫಾರಂ ಹೌಸ್ನಲ್ಲಿ ಚಿರತೆ ಸೆರೆಯಾಗಿದೆ. ಚಿರತೆಯ ಉಪಟಳ ಹೆಚ್ಚಾಗಿದ್ದರಿಂದ ಜನರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ವಿವಿಧಡೆ ಬೋನ್ಗಳನ್ನು ಇರಿಸಿತ್ತು. ಅರಣ್ಯ ಇಲಾಖಾ ಸಿಬ್ಬಂದಿಯ ನಿರೀಕ್ಷೆಯಂತೆ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಸೆರೆಯಾದ ಚಿರತೆಗಳನ್ನು ತಂದು, ಅದಕ್ಕೆ ಮೈಕ್ರೊಚಿಪ್ ಅಳವಡಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ. ಹೊಲ, ತೋಟಗಳಲ್ಲಿ ಇರುತ್ತಿದ್ದ ಸಾಕುಪ್ರಾಣಿಗಳನ್ನು ಹೊತ್ತೊಯ್ದು ಉಪಟಳ ನೀಡುತ್ತಿದ್ಚವು. ಚಿರತೆಗಳ ಕಾಟದಿಂದ ಗ್ರಾಮಸ್ಥರಲ್ಲಿ ಭಯ ಉಂಟಾಗಿತ್ತು. ಸದ್ಯ ಎರಡು ಚಿರತೆಗಳು ಸೆರೆಯಾಗಿದ್ದರಿಂದ ಆತಂಕ ದೂರವಾಗಿದೆ.
ಇದನ್ನೂ ಓದಿ: ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು.. ಅರಣ್ಯಾಧಿಕಾರಿಗಳಿಗೆ ಜನ ಹೇಳಿದ್ದೇನು?