ತುಮಕೂರು: ಲಾರಿ–ಕಾರು ನಡುವೆ ಡಿಕ್ಕಿ.. ಇಬ್ಬರು ಸಾವು, ಐವರಿಗೆ ಗಂಭೀರ ಗಾಯ - ತುಮಕೂರು

🎬 Watch Now: Feature Video

thumbnail

By

Published : Jun 14, 2023, 1:59 PM IST

ತುಮಕೂರು: ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ‌ ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ಈ ಘಟನೆ ನಡೆದಿದೆ. ಮೃತರನ್ನು ದಾವಣೆಗೆರೆ ಮೂಲದ ಶಿವು ನಾಯಕ್ (32), ಕೊಡಿಗೇನಹಳ್ಳಿಯ ಪರಮೇಶ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಗಾಢ ನಿದ್ದೆಯಲ್ಲಿದ್ದವರ ಮೇಲೆ ಹರಿದ JCB: ಮೂವರ ದಾರುಣ ಸಾವು

ಮಧ್ಯ ರಾತ್ರಿ(ಮಂಗಳವಾರ) ಸುಮಾರು 2 ಗಂಟೆ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಯುವಕರ ತಂಡ ದಾಬಸ್ ಪೇಟೆಯಲ್ಲಿ ಸ್ನೇಹಿತನ ಮದುವೆ ಮುಗಿಸಿ ತುಮಕೂರು ಮೂಲಕ ಕೊಡಿಗೇನ ಹಳ್ಳಿ ಕಡೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆಂಧ್ರದಿಂದ ತುಮಕೂರಿಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಒಟ್ಟು 7 ಜನರು ಪ್ರಯಾಣಿಸುತ್ತಿದ್ದರು. ದುರ್ಘಟನೆ ಇಬ್ಬರು ಸಾವನಪ್ಪಿ, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​​ಗೆ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ವಿಜಯಪುರ: ಬೈಕ್​ ಕ್ಯಾಂಟರ್​ ನಡುವೆ ಡಿಕ್ಕಿ ನವದಂಪತಿ ಸಾವು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.