ಸಟ್ಲೆಜ್ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಗಳು ಪ್ರತ್ಯಕ್ಷ.. - ಈಟಿವಿ ಭಾರತ ಕನ್ನಡ
🎬 Watch Now: Feature Video

ಫಿರೋಜ್ಪುರ: ಈ ಭಾಗದಲ್ಲಿ ಹರಿಯುವ ಸಟ್ಲೆಜ್ ಎಂಬ ನದಿಯಲ್ಲಿ ಎರಡು ಬೃಹತ್ ಗಾತ್ರದ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಮೀನುಗಾರರು ಮತ್ತು ನದಿಯ ದಡದಲ್ಲಿ ಕೃಷಿ ಚಟುವಟಿಕೆ ನಡೆಸುವ ರೈತರು ಆತಂಕಗೊಂಡಿದ್ದಾರೆ. ಇನ್ನು ಮೀನುಗಾರಿಕೆ ಸಮಯದಲ್ಲಿ ಎರಡು ಮೊಸಳೆಗಳು ಕಂಡು ಬಂದ ಹಿನ್ನೆಲೆ ನದಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಿಲ್ಲಿಸಿದ್ದೇವೆ ಎಂದು ಮೀನುಗಾರರು ಹೇಳಿದ್ದಾರೆ. ಅಲ್ಲದೇ ನದಿಯ ದಡದಲ್ಲಿ ಕೃಷಿ ಜಮೀನುಗಳಿದ್ದು, ಅಲ್ಲಿಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಬೇಗ ಮೊಸಳೆಗಳನ್ನು ಸೆರೆ ಹಿಡಿದು ಬೇರೊಂದು ಕಡೆಗೆ ಸ್ಥಳಾಂತರ ಮಾಡಿ ಎಂದು ಅರಣ್ಯ ಇಲಾಖೆಗೆ ಮೀನುಗಾರರು ಮತ್ತು ರೈತರು ಆಗ್ರಹಿಸಿದ್ದಾರೆ.
Last Updated : Feb 3, 2023, 8:34 PM IST