ಭಾರತ-ಅಮೆರಿಕ ಸೇನಾಪಡೆಗಳ ನಡುವೆ ಜಂಟಿ ಸಮರಾಭ್ಯಾಸ- ವಿಡಿಯೋ - ಅಮೆರಿಕಾದ ಅಲಾಸ್ಕಾದಲ್ಲಿ ಜಂಟಿ ಸಮರಾಭ್ಯಾಸ
🎬 Watch Now: Feature Video
Published : Oct 1, 2023, 5:51 PM IST
ಅಲಾಸ್ಕಾ (ಅಮೆರಿಕ) : ಭಾರತ ಮತ್ತು ಅಮೆರಿಕದ ಸೇನಾಪಡೆಗಳು ಅಮೆರಿಕದ ಅಲಾಸ್ಕಾದಲ್ಲಿ ಜಂಟಿ ಸಮರಾಭ್ಯಾಸದಲ್ಲಿ ತೊಡಗಿವೆ. ಉಭಯ ದೇಶಗಳ ಯೋಧರ ನಡುವೆ 'ಯುಧ್ ಅಭ್ಯಾಸ್' ತಾಲೀಮು ನಡೆಯುತ್ತಿದ್ದು, ಶುಕ್ರವಾರ ಸೇನಾ ಪಡೆಗಳು ಭಯೋತ್ಪಾದನಾ ನಿಗ್ರಹ ಶಸ್ತ್ರಾಭ್ಯಾಸ ನಡೆಸಿದವು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಭಾರತ ಮತ್ತು ಅಮೆರಿಕ ನಡುವಿನ 19ನೇ ಆವೃತ್ತಿಯ ಜಂಟಿ ಸಮರಾಭ್ಯಾಸವಾಗಿದೆ. ಈ ಸಮರಾಭ್ಯಾಸವು ಭಾರತೀಯ ಸೇನೆ ಮತ್ತು ಅಮೆರಿಕದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸಲು ಪೂರಕವಾಗಿದೆ. ಇದೇ ವೇಳೆ ವಿವಿಧ ಸಮರಾಭ್ಯಾಸಗಳನ್ನು ಪರಸ್ಪರ ಅರಿತುಕೊಳ್ಳಲು ಸಹಕಾರಿಯಾಗಲಿದೆ. ಸಮರಾಭ್ಯಾಸವು ಸೆಪ್ಟೆಂಬರ್ 25ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 8ರವರೆಗೆ ನಡೆಯಲಿದೆ. ಭಾರತೀಯ ಸೇನೆಯ 350 ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ, ಅಮೆರಿಕ ಸೇನಾ ಪಡೆಗಳು ಯುದ್ಧ ನೈಪುಣ್ಯತೆಯನ್ನು ಹೊಂದಲು 'ಯುದ್ಧ್ ಅಭ್ಯಾಸ್' ಎಂಬ ಜಂಟಿ ಸಮರಾಭ್ಯಾಸ ನಡೆಸುತ್ತಿವೆ.
ಇದನ್ನೂ ಓದಿ : ಸಮುದ್ರ ತೀರಕ್ಕೆ ಕೊಚ್ಚಿಕೊಂಡು ಬಂದ ಬ್ರಿಟಿಷರ ಕಾಲದ ಬೃಹತ್ ಮರದ ಪೆಟ್ಟಿಗೆ... ಒಡೆದಾಗ ಸಿಕ್ಕಿದೇನು?.. ವಿಡಿಯೋ