ರಸ್ತೆಗೆ ಬಿದ್ದ ಕಲ್ಲುಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಟ್ರಾಫಿಕ್ ಪೊಲೀಸ್: ವಿಡಿಯೋ - ಹುಬ್ಬಳ್ಳಿ ಟ್ರಾಫಿಕ್ ಪೊಲೀಸ್ ವೈರಲ್ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/18-10-2023/640-480-19800562-thumbnail-16x9-vny2.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 18, 2023, 9:13 PM IST
ಹುಬ್ಬಳ್ಳಿ: ಇಲ್ಲಿಯ ಉತ್ತರ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸರೊಬ್ಬರು ರಸ್ತೆಗೆ ಬಿದ್ದ ಡಿವೈಡರ್ ಕಲ್ಲುಗಳನ್ನು ಸಮಾನಾಗಿ ಹೊಂದಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಬಳಿ ಇರುವ ಮಿರ್ಜಾಂಕರ್ ಪೆಟ್ರೋಲ್ ಬಂಕ್ ಎದುರಿಗೆ ಡಿವೈಡರ್ ಕಲ್ಲು ಎಲ್ಲೆಂದರಲ್ಲಿ ಚದುರಿ ರಸ್ತೆಗೆ ಬಿದ್ದಿತ್ತು. ವಾಹನ ಸವಾರರು ಆತಂಕದಲ್ಲಿ ವಾಹನ ಚಾಲನೆ ಮಾಡಿಕೊಂಡು ಓಡಾಡುತ್ತಿದ್ದರು. ಇದನ್ನು ಗಮನಿಸಿದ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಟ್ರಾಫಿಕ್ ಪೊಲೀಸ್ ಸಂತೋಷ ಚವ್ಹಾಣ ಆ ಕಲ್ಲುಗಳನ್ನು ಹೊಂದಿಸಿ ಸವಾರರ ಆತಂಕ ದೂರ ಮಾಡಿದರು.
ಇಂಥ ಕಲ್ಲುಗಳಿಗೆ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿವೆ. ಇವರು ಮಾಡಿರುವ ಕಾರ್ಯದ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ಸಂತೋಷ ಚವ್ಹಾಣರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕಾರವಾರ: ಹತ್ತಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ!- ವಿಡಿಯೋ