ಬಂಡೀಪುರ: ಒಂದೆಡೆ ಹೈ ಸೆಕ್ಯೂರಿಟಿ, ಮತ್ತೊಂದೆಡೆ ಆನೆಗಳ ಜೊತೆ ಪ್ರವಾಸಿಗರ ಸೆಲ್ಫಿ - chamarajanagara
🎬 Watch Now: Feature Video
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಸಫಾರಿಗೆ ಕ್ಷಣಗಣನೆ ಆರಂಭವಾಗಿದ್ದು ಪೊಲೀಸರು ಎಲ್ಲೆಡೆ ಹೈ ಅಲರ್ಟ್ ಆಗಿದ್ದಾರೆ. ಈ ನಡುವೆ ಬಂಡೀಪುರದಿಂದ ಊಟಿಗೆ ಹೋಗುವ ರಸ್ತೆಯಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಅದನ್ನು ಕಂಡ ಪ್ರವಾಸಿಗರು ಆನೆಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಬಂಡೀಪುರ ಕಾಡಿನ ಹಾದಿಯಲ್ಲಿ ಕಾರ್ಗಳನ್ನು ನಿಲ್ಲಿಸಿ ಅದರ ಜೊತೆ ಯುವಕರ ಗುಂಪು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಡಿಯೋ ಮಾಧ್ಯಮದವರ ಕ್ಯಾಮರಾಗೆ ಸೆರೆ ಸಿಕ್ಕಿದೆ. ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದು, ಫೋಟೋ ತೆಗೆದುಕೊಳ್ಳುವುದು ಅಪರಾಧವಾಗಿದೆ.
ಹುಲಿ ಗಣತಿ ವರದಿ ಬಿಡುಗಡೆ: ಭಾನುವಾರ (ಏ.9 ರಂದು) ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ನಡೆಸಿ, ನಂತರ ಮೈಸೂರಿನ ಕೆಎಸ್ಒಯು ಭವನದಲ್ಲಿ 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ವರದಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂಬ ಕಾತರ ಎಲ್ಲರಲ್ಲೂ ಮೂಡಿದೆ. ಈ ಕಾರ್ಯಕ್ರಮ ಬಂಡೀಪುರ ಹುಲಿ ಯೋಜನೆಗೆ 50ರ ಸಂಭ್ರಮವಾಗಿದೆ.
ಇದನ್ನೂ ಓದಿ: ಭಾರತದ ಹುಲಿ ಸಂರಕ್ಷಣಾ ಯೋಜನೆಗೆ 50ರ ಸಂಭ್ರಮ: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರುವ ನಿರೀಕ್ಷೆ