thumbnail

By

Published : May 20, 2023, 1:34 PM IST

ETV Bharat / Videos

ಬ್ಯಾಂಕ್​ನಿಂದ ಹಣ ಪಡೆದು ಬರುತ್ತಿದ್ದ ವ್ಯಕ್ತಿಯ ಬ್ಯಾಗ್ ಕಿತ್ತುಕೊಂಡು ಹೋದ ಕಳ್ಳರು..!

ಮೈಸೂರು: ಮೈಸೂರು ನಗರದಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್​ನಿಂದ ಹಣವನ್ನು ಡ್ರಾ ಮಾಡಿಕೊಂಡು ಹಣವನ್ನು ಬ್ಯಾಗ್​ನಲ್ಲಿ ಇಟ್ಟುಕೊಂಡು ಹೊರಬಂದಾಗ ಬೈಕಿನಲ್ಲಿ ಬಂದ ಖದೀಮರು ಕಿತ್ತುಕೊಂಡು ಹೋಗಿದ್ದಾರೆ. ವ್ಯಕ್ತಿಯ ಬಳಿ ಇದ್ದ ಹಣದ ಬ್ಯಾಗ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರು ಬ್ಯಾಗ್ ಕಿತ್ತುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಕುವೆಂಪುನಗರದ ನಿವಾಸಿಯಾಗಿರುವ ಮದನ್ ಎಂಬುವರು ಬ್ಯಾಂಕ್​ನಿಂದ ಹಣ ತರಲು ನೃಪತುಂಗ ರಸ್ತೆಯ ಎಸ್​ಬಿಐ ಬ್ರಾಂಚ್​ಗೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಸುಮಾರು 1.35 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಹೊರಬಂದಿದ್ದರು. ಹಣವನ್ನು ಬಟ್ಟೆ ಬ್ಯಾಗ್​ನಲ್ಲಿ ಇಟ್ಟುಕೊಂಡು ನಡೆದುಕೊಂಡು ಹೋಗುತ್ತಿರುವಾಗ, ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಹಣವಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ: ಖದೀಮರು ಬ್ಯಾಗ್ ಕಿತ್ತುಕೊಂಡು ಹೋಗುವಾಗ‌ ಮದನ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಜೋರಾಗಿ ಕೂಗಿದ್ದಾರೆ. ಅಷ್ಟರಲ್ಲಿ ಹಣದ ಬ್ಯಾಗ್​ ಸಮೇತ ಕಳ್ಳರು ಕಣ್ಮರೆಯಾಗುತ್ತಾರೆ. ನಂತರ ಸಮೀಪದ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಕೃಷ್ಣ ಮೃಗದ ‌ಚರ್ಮ‌, ಕೊಂಬು ಮಾರಾಟಕ್ಕೆ ಯತ್ನ: ಓರ್ವನ ಬಂಧನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.