ರಸ್ತೆ ಬದಿಯ ಅಲಂಕಾರಿಕ ಗಿಡಗಳನ್ನೇ ಕದ್ದೊಯ್ದ ಖದೀಮರು.. ಬೆಂಗಳೂರಲ್ಲಿ ಇಂಥವರೂ ಇದಾರೆ ಹುಷಾರ್! - ಅಂಗಡಿಗಳಲ್ಲಿ ಕಳ್ಳತನ
🎬 Watch Now: Feature Video
ಬೆಂಗಳೂರು: ಮನೆಗಳ್ಳತನ, ಸರಗಳ್ಳತನ, ಅಂಗಡಿಗಳಲ್ಲಿ ಕಳ್ಳತನ ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಗರದ ಅಂದ ಹೆಚ್ಚಿಸಲು ರಸ್ತೆ ಬದಿಯಲ್ಲಿ ಬೆಳೆಸಿರುವ ಅಲಂಕಾರಿಕ ಗಿಡಗಳನ್ನೂ ಬಿಡದೇ ಕದ್ದೊಯ್ದ ವಿಚಿತ್ರ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ 21ರಂದು ಹಾಡಹಗಲೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಗಲಿನಲ್ಲೇ, ಜನ ಸಂಚಾರ ಇರುವಾಗಲೇ ದ್ವಿಚಕ್ರ ವಾಹನದಲ್ಲಿ ಬಂದ ಯುವಕರಿಬ್ಬರು ನಿರ್ಭೀತಿಯಿಂದ ರಸ್ತೆ ಬದಿಯಲ್ಲಿರುವ ಅಲಂಕಾರಿಕ ಗಿಡಗಳಲ್ಲಿ ಒಳ್ಳೆ ಗಿಡವನ್ನು ಗುರುತಿಸಿ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Feb 3, 2023, 8:37 PM IST