ಧಾರವಾಡ: ನಿಧಿ ಆಸೆಗಾಗಿ ಹನುಮಂತ ದೇವರ ಮೂರ್ತಿ ಅಗೆದ ಕಳ್ಳರು-ವಿಡಿಯೋ
🎬 Watch Now: Feature Video
Published : Nov 20, 2023, 1:28 PM IST
ಧಾರವಾಡ: ನಿಧಿ ಆಸೆಗಾಗಿ ಹನುಮಂತ ದೇವರ ಮೂರ್ತಿ ಅಗೆದ ಘಟನೆ ಧಾರವಾಡದ ತಾಲೂಕಿನ ಹಂಗರಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಳೆಯ ಕಾಲದ ಹನುಮಂತ ದೇವರ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ಈ ರೀತಿ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಗರಗ ಗ್ರಾಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಹೊರವಲಯದ ಬೋಕ್ಯಾಪುರ ಕೆರೆ ದಂಡೆ ಮೇಲೆ ಹನುಮಂತ ದೇವರ ದೇವಸ್ಥಾನವಿದೆ. ಗ್ರಾಮದಿಂದ ಈ ಗುಡಿ ಎರಡು ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಪೂಜೆ ಮಾಡಿ ಈ ಕೃತ್ಯ ಎಸಗಿದ್ದಾರೆ.
4 ಅಡಿ ಎತ್ತರದ ದೊಡ್ಡ ಹನುಮಂತ ದೇವರ ಮೂರ್ತಿ ಇರುವ ದೇವಸ್ಥಾನದ ದೊಡ್ಡ ಮೂರ್ತಿಯನ್ನೇ ಕಿತ್ತು ತೆಗೆದಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮೂರ್ತಿಯನ್ನು ಕಿತ್ತು ತೆಗೆದಿರುವ ಕಿಡಿಗೇಡಿಗಳು ಕೆಳಗಡೆ 2-3 ಅಡಿ ಅಗೆದಿದ್ದಾರೆ. ಬಳಿಕ ಅಲ್ಲಿ ತೆಂಗಿನಕಾಯಿ, ಲಿಂಬೆ ಹಣ್ಣು ಇಟ್ಟು ಪೂಜೆ ಮಾಡಿದ್ದಾರೆ. ಗುಡಿಯು ಊರ ಹೊರಗೆ ಇರುವ ಕಾರಣಕ್ಕೆ ರಾತ್ರಿ ಹೊತ್ತು ಅಲ್ಲಿ ಜನರ ಓಡಾಟ ಕಡಿಮೆ ಇರುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ರೀತಿ ಕೃತ್ಯ ಎಸಗಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದು, ಪೊಲೀಸರು ಕಳ್ಳರನ್ನು ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಮಾಲೀಕನೆದುರೇ ಕಾರ್‌ನಲ್ಲಿದ್ದ ಚಿನ್ನ ಲೂಟಿ- ಸಿಸಿಟಿವಿ ವಿಡಿಯೋ