ಕಾರಿನ ಗ್ಲಾಸ್ ಒಡೆದು ಕಳ್ಳರ ಕೈಚಳಕ: ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆದ ಖದೀಮರು - etv bharat kannda
🎬 Watch Now: Feature Video
ಆನೇಕಲ್(ಬೆಂಗಳೂರು): ಕಾರಿನ ಗ್ಲಾಸ್ ಒಡೆದು ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಸೂರ್ಯಸಿಟಿ ಸಮೀಪದ ಆಸ್ಪತ್ರೆ ಮುಂಭಾಗ ನಡೆದಿದೆ. ಅಶ್ವಿನ್ ರೆಡ್ಡಿ ಎಂಬುವವರಿಗೆ ಸೇರಿದ ಸ್ವಿಫ್ಟ್ ಕಾರನ್ನ ನಿನ್ನೆ ಸಂಜೆ(ಗುರುವಾರ) ಆಸ್ಪತ್ರೆಯ ಮುಂಭಾಗ ನಿಲ್ಲಿಸಿದ್ದರು. ಈ ವೇಳೆ, ಹೊಂಚು ಹಾಕಿದ್ದ ಖತರ್ನಾಕ್ ಕಳ್ಳರು ಕಾರಿನ ಗ್ಲಾಸ್ ಒಡೆದು 27,500 ರೂ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಸಂಬಂಧ ಹಣ ಕಳೆದುಕೊಂಡ ಕಾರು ಮಾಲೀಕ ಇಂದು ಸಿಸಿಟಿವಿ ಸಮೇತ ಬಂದು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ: ಮತ್ತೊಂದೆಡೆ, ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, 6 ಲಕ್ಷ ಹಣವಿದ್ದ ಬ್ಯಾಗ್ ದೋಚಿ ಖದೀಮ ಪರಾರಿಯಾಗಿರುವ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಹೆಬ್ಬಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಬಿಲ್ ಕಲೆಕ್ಟರ್ ಆಗಿರುವ ಕೆ.ತುಳಸಿದಾಸ್ ಎಂಬುವವರ ಬಳಿ ಹಣವಿದ್ದ ಬ್ಯಾಗ್ ಅನ್ನು ಖದೀಮ ಬ್ಯಾಂಕಿನ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾನೆ.
ಇದನ್ನೂ ಓದಿ:ಜಾಗಿಂಗ್ ಸೋಗಿನಲ್ಲಿ ಬಂದು ಮಧ್ಯರಾತ್ರಿ ಚಿನ್ನದ ಅಂಗಡಿ ದೋಚಿದ ಕಳ್ಳರು.. ಸಿಸಿಟಿವಿಯಲ್ಲಿ ಸೆರೆ