ಆನೇಕಲ್: ಬೈಕ್‌ನಲ್ಲಿಟ್ಟಿದ್ದ ₹6 ಲಕ್ಷ ಹಣ ಮಾಯ! - etv bharat karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17660687-thumbnail-4x3-ck.jpg)
ಆನೇಕಲ್: ಬೈಕ್‌ನಲ್ಲಿಟ್ಟಿದ್ದ 6 ಲಕ್ಷ ರೂಪಾಯಿ ಹಣವನ್ನು ಖದೀಮರು ದೋಚಿರುವ ಘಟನೆ ಆನೇಕಲ್ ಪಟ್ಟಣದ ಮುಖ್ಯರಸ್ತೆಯಲ್ಲಿಂದು ನಡೆದಿದೆ. ಖಾಸಗಿ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ ಉಮೇಶ್ ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿ ತಮ್ಮ ಬೈಕ್ನ ಡಿಕ್ಕಿಯಲ್ಲಿಟ್ಟಿದ್ದರು. ಮನೆಗೆ ಹೋಗುವ ಮಾರ್ಗಮಧ್ಯೆ ಬೇರೊಂದು ಕೆಲಸದ ನಿಮಿತ್ತ ಬೈಕ್ ನಿಲ್ಲಿಸಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಖದೀಮರು ಡಿಕ್ಕಿಯಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಮೂವರ ತಂಡ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಸಿಟಿವಿಗಳ ಸಹಾಯದ ಮೂಲಕ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಲಂಚ ನೀಡುವಂತೆ ಲಾರಿ ಚಾಲಕನಿಗೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್ಸ್ಟೆಬಲ್