ಧಾರವಾಡ: ದೇವಸ್ಥಾನದ ಮೂರ್ತಿಯನ್ನೇ ಕದ್ದೊಯ್ದ ಖದೀಮ.. ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಉದ್ಭವ ಮೂರ್ತಿ ಶ್ರೀಕಲ್ಮೇಶ್ವರ
🎬 Watch Now: Feature Video
ಧಾರವಾಡ: ದೇವರ ಮೂರ್ತಿಯನ್ನೇ ಕದ್ದ ಚಾಲಾಕಿಯೋರ್ವನ ಕೈಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಶಿರಕೋಳ ಗ್ರಾಮದ ಉದ್ಭವ ಮೂರ್ತಿ ಶ್ರೀಕಲ್ಮೇಶ್ವರನ 11 ಕೆಜಿ ಬೆಳ್ಳಿಯ ಮೂರ್ತಿಯನ್ನು ಖದೀಮ ಕದ್ದು ಪರಾರಿಯಾಗಿದ್ದಾನೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ಕಳ್ಳನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದ್ದು, ಶ್ರೀಕಲ್ಮೇಶ್ವರನ ಮೂರ್ತಿ ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನದತ್ತ ಭಕ್ತರು ಜಮಾಯಿಸಿದ್ದರು. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಭಕ್ತರನ್ನು ಹಾಗೂ ಸಕಲ ಜೀವರಾಶಿಗಳನ್ನು ಉದ್ಧಾರ ಮಾಡಲು ಭೂಮಿಯಿಂದ ಲಿಂಗದ ರೂಪದಲ್ಲಿ ಉದ್ಭವಿಸಿದ ಶಿವ ಕಲ್ಮೇಶ್ವರ ಗ್ರಾಮದಲ್ಲಿ ನೆಲೆ ನಿಂತಿದ್ದಾನೆ ಎಂಬ ನಂಬಿಕೆ ಇದೆ. ಶಿರಕೋಳ ಗ್ರಾಮದಲ್ಲಿ ಕಲ್ಮೇಶ್ವರನ ಭವ್ಯವಾದ ದೇವಾಲಯ ಇದ್ದು, ಪ್ರತಿ ಸೋಮವಾರ, ಅಮವಾಸ್ಯೆ ಹಾಗೂ ಹುಣ್ಣಿಮೆ ದಿವಸ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ ಈಗ ಕಲ್ಮೇಶ್ವರ ಮೂರ್ತಿ ಕಳ್ಳತನದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ನೋಡಿ: ದೇವಸ್ಥಾನದ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಕಳ್ಳರು: ಸಿಸಿಟಿವಿ ದೃಶ್ಯ