ವಿಶೇಷಚೇತನ ಯುವಕನ ಕೈಯಲ್ಲಿ ಅರಳಿದ ಅದ್ಭುತ ಚಿತ್ರಗಳು.. - ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ
🎬 Watch Now: Feature Video
ಕೋಯಿಕ್ಕೋಡ್ (ಕೇರಳ): ಬೆನ್ನುಹುರಿಯಲ್ಲಿ ಗಡ್ಡೆಯಿಂದ ಬಳಲುತ್ತಿದ್ದ ಕೋಯಿಕ್ಕೋಡ್ ಜಿಲ್ಲೆಯ ಬಲುಶೇರಿ ನಿವಾಸಿ ಸಮೀಜ್ ವಿಶೇಷ ಸಾಧನೆ ಮಾಡಿದ ಕಥೆ ಇದು. ಹೌದು, 7ನೇ ತರಗತಿವರೆಗೆ ಎಲ್ಲರಂತೆ ನಗುತ್ತಾ ಸಾಮಾನ್ಯವಾಗಿ ಆಟವಾಡುತ್ತ ಬೆಳೆದ ಸಮೀಜ್, 2ನೇ ತರಗತಿಯಲ್ಲಿ ಓದುತ್ತಿದ್ದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು.
ಮೊದಲಿಗೆ ಸಮೀಜ್ಗೆ ಅವರ ಪೋಷಕರು ಆಯುರ್ವೇದ ಹಾಗೂ ನೈಸರ್ಗಿಕ ಚಿಕಿತ್ಸೆ ಕೊಡಿಸಿದ್ದರು. ಆದರೆ, ಅದಕ್ಕೆ ಸೂಕ್ತವಾದ ಪರಿಹಾರ ದೊರೆಯಲಿಲ್ಲ. ಎಂಆರ್ಐ ಸ್ಕ್ಯಾನ್ ಮಾಡಿದ ನಂತರ ಬೆನ್ನುಹುರಿಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. 2009ರಲ್ಲಿ ಸಮೀಜ್ಗೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಷ್ಟರಲ್ಲಾಗಲೇ ಆ ಗಡ್ಡೆ ಬೆಳೆದು ನಿಂತಿದ್ದರಿಂದ ದೇಹದ ಆಕಾರವೇ ಬದಲಾಗಿತ್ತು.
ನಡೆಯಲು ಸಾಧ್ಯವಾಗದ ಸಮೀಜ್ಗೆ ಪೋಷಕರು 12ನೇ ತರಗತಿವರೆಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ನಿತ್ಯ ಮನೆಯವರ ಆತನನ್ನು ಕರೆತಂದು ಶಾಲೆಗೆ ಬಿಟ್ಟು ಹೋತ್ತಿದ್ದರು. ಈಗ ಸಮೀಜ್ನನ್ನು ಮನೆಯಲ್ಲಿ ಬಿಟ್ಟು, ತಂದೆ ಮುಜೀಬ್ ಮತ್ತು ತಾಯಿ ಸಮೀರಾ ಕೆಲಸಕ್ಕೆ ಹೋಗುತ್ತಾರೆ. ಈಗ ಅವರಿಗೆ 19 ವರ್ಷ.
ಚಿತ್ರ ಬಿಡಿಸಲು ಕಾಯಕದಲ್ಲಿ ತೊಡಗಿದ ಸಮೀಜ್: ಸ್ವಂತ ಸಣ್ಣ ಆದಾಯ ಗಳಿಸಬೇಕು ಎಂದು ಅನಿಸಿದ್ದರಿಂದ ಅವರು ಚಿತ್ರ ಬಿಡಿಸುವ ಕಾಯಕ ಆರಂಭಿಸಿದ್ದಾರೆ. ಈಗ ವಿಶೇಷಚೇತನ ಯುವಕ ತಮ್ಮ ಚಿತ್ರಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸಲು ಮುಂದಾಗಿದ್ದಾರೆ. ಇವರಿಗೆ ಹೆಚ್ಚಾಗಿ ವಾಹನಗಳ ಬಗ್ಗೆ ಆಸಕ್ತಿ ಇದೆ. ಈ ಯುವಕ ಕುಂಚದಿಂದ ವಾಹನಗಳ ಚಿತ್ರಗಳು ಅರಳಿವೆ. ಜೊತೆಗೆ ಮೋಹನ್ ಲಾಲ್, ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರಂತಹ ಚಲನಚಿತ್ರ ತಾರೆಯರ ಚಿತ್ರಗಳನ್ನು ಬಿಡಿಸಿದ್ದಾರೆ. ತಾನೇ ಸ್ವತಃ ವಾಹನ ಓಡಿಸಬೇಕು ಎನ್ನುವುದು ಸಮೀಜ್ ಅವರ ದೊಡ್ಡ ಕನಸು ಹೊಂದಿದ್ದಾರೆ. ಈ ಯುವಕ ಅದನ್ನು ಕೂಡಾ ನನಸು ಮಾಡಲು ಪ್ರಯತ್ನಿಸುತ್ತಿದ್ದಾನೆ.
ಇದನ್ನೂ ಓದಿ: ಹಾವೇರಿ: ರಂಗಪಂಚಮಿ ರಂಗು, ಪ್ರಮುಖ ಬೀದಿಗಳಲ್ಲಿ ಕಾಮರತಿ ಪ್ರತಿಷ್ಠಾಪನೆ