ಹಠವಾದಿ ಹೋರಿಯ ತಿಥಿ ಕಾರ್ಯ ಮಾಡಿದ ಮಾಲೀಕ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹಾವೇರಿ : ಮನುಷ್ಯ ತೀರಿಕೊಂಡ ಬಳಿಕ ಸಾಮಾನ್ಯವಾಗಿ ತಿಥಿ ಮಾಡುತ್ತೇವೆ. ಆದರೆ ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದ ರೈತನೊಬ್ಬ ತನ್ನ ನೆಚ್ಚಿನ ಹೋರಿ ಸಾವನ್ನಪ್ಪಿದ ಐದು ದಿನಗಳಿಗೆ ತಿಥಿ ಕಾರ್ಯ ಮಾಡುವ ಮೂಲಕ ಪ್ರಾಣಿಪ್ರೇಮ ಮೆರೆದಿದ್ದಾರೆ. ಚಿಕ್ಕಲಿಂಗದಹಳ್ಳಿಯ ಸುರೇಶ ಸೋಮನಕಟ್ಟಿ ಎಂಬವರು ತಮ್ಮ ಪ್ರೀತಿಯ ಹಠವಾದಿ ಎಂಬ ಹೋರಿಯ ತಿಥಿಕಾರ್ಯ ಮಾಡಿದ್ದಾರೆ. ಕಳೆದ ಮಂಗಳವಾರ ಈ ಹೋರಿ ವಯೋಸಹಜ ಕಾಯಿಲೆಯಿಂದ ಅಸುನೀಗಿತ್ತು. ಬಳಿಕ ಹಠವಾದಿಯ ಅಂತ್ಯಕ್ರಿಯೆಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ಮಾಡಲಾಗಿತ್ತು. ಇಂದು ಹಠವಾದಿಯ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ,ಅದರ ಉಡುಪುಗಳನ್ನಿಟ್ಟು ಜೊತೆಗೆ ಪ್ರಿಯವಾದ ಆಹಾರ ಪದಾರ್ಥಗಳನ್ನು ಇರಿಸಿ ತಿಥಿಕಾರ್ಯ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಲವೆಡೆಯಿಂದ ಹಠವಾದಿ ಅಭಿಮಾನಿಗಳು ಆಗಮಿಸಿದ್ದರು. ಸಾವಿರಾರು ಜನರಿಗೆ ತಿಥಿ ಊಟದ ವ್ಯವಸ್ಥೆ ಮಾಡಲಾಗಿತ್ತು.
Last Updated : Feb 3, 2023, 8:28 PM IST