Watch.. ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರಕ್ಕೆ ಈರುಳ್ಳಿ ರವಾನೆ! - Lack of commodities faced in Manipur state
🎬 Watch Now: Feature Video
ಮನ್ಮಾಡ್: ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದಿಂದ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಹೀಗಾಗಿ, 800 ಟನ್ ಈರುಳ್ಳಿಯನ್ನು ಸರಕು ಸಾಗಣೆ ರೈಲಿನಲ್ಲಿ ಖೋಂಗ್‌ಸೋಂಗ್ಲಾ ನಿಲ್ದಾಣಕ್ಕೆ ತಲುಪಿಸಲಾಗಿದೆ.
ಅಲ್ಲಿನ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿವಿಧ ರಾಜ್ಯಗಳಿಂದ ಅಗತ್ಯ ವಸ್ತುಗಳನ್ನು ಮಣಿಪುರಕ್ಕೆ ಕಳುಹಿಸಲಾಗುತ್ತಿದೆ. ನಾಸಿಕ್ ಜಿಲ್ಲೆ ಈರುಳ್ಳಿಗೆ ಹೆಸರುವಾಸಿಯಾದ ಕಾರಣ, 800 ಟನ್ ಈರುಳ್ಳಿಯನ್ನು ಸರಕು ಸಾಗಣೆ ರೈಲಿನಲ್ಲಿ ಕಳುಹಿಸಲಾಗಿದೆ. ಅಲ್ಲೀಗ ಕಟ್ಟುನಿಟ್ಟಿನ ಭದ್ರತೆ ಕಲ್ಪಿಸಲಾಗಿದೆ.
ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷ: ದೇಶಾದ್ಯಂತ ಜನರು ಮಣಿಪುರಕ್ಕೆ ಸಹಾಯ ಮಾಡಲು ಧಾವಿಸಿದ್ದಾರೆ. ಅನೇಕ ರಾಜ್ಯಗಳ ಸರ್ಕಾರವು ಮಣಿಪುರಕ್ಕೆ ವಿವಿಧ ರೂಪದಲ್ಲಿ ಸಹಾಯವನ್ನು ಮಾಡಿದೆ. ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರಗಳು ನಡೆಯುತ್ತಿವೆ ಮತ್ತು ಇದರಿಂದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.
ಇದನ್ನೂ ಓದಿ: ಗುವಾಹಟಿಯಿಂದ ಮಣಿಪುರ ತಲುಪಿದ ಮೊದಲ ಸರಕು ರೈಲು..