ಚಿಕ್ಕಮಗಳೂರು: ರಾಕೆಟ್ ಪಟಾಕಿಯ ಕಿಡಿ ತಗುಲಿ ಮನೆ ಬೆಂಕಿಗಾಹುತಿ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16759044-thumbnail-3x2-yy.jpg)
ಚಿಕ್ಕಮಗಳೂರು: ರಾಕೆಟ್ ಪಟಾಕಿಯ ಕಿಡಿ ತಗುಲಿ ಮನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದ ಛತ್ರ ಮೈದಾನದ ಬಳಿ ನಡೆಯಿತು. ದೀಪಾವಳಿ ಹಬ್ಬಕ್ಕೆ ರಾತ್ರಿ ಸಮಯದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಕಿಡಿ ಮನೆಯೊಂದರ ಮಹಡಿ ಮೇಲೆ ಒಣ ಹಾಕಿದ್ದ ಬಟ್ಟೆಗೆ ತಗುಲಿ ಇಡೀ ಮನೆಗೆ ಆವರಿಸಿದೆ. ಕೂಡಲೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated : Feb 3, 2023, 8:30 PM IST