ಬಸ್ನಲ್ಲಿ ಸೀಟು ಸಿಗದೇ ಮೊಮ್ಮಗುವಿನೊಂದಿಗೆ ಪುಟ್ ಬೋರ್ಡ್ನಲ್ಲಿ ಕುಳಿತು ಪ್ರಯಾಣಿಸಿದ ಅಜ್ಜಿ - ವಿಡಿಯೋ
🎬 Watch Now: Feature Video
ಕೊಪ್ಪಳ: ಬಹುತೇಕ ಬಸ್ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವೃದ್ಧೆಯೊಬ್ಬರು ತನ್ನ ಮೊಮ್ಮಗುವಿನೊಂದಿಗೆ ಬಸ್ನ ಫುಟ್ ಬೋರ್ಡ್ನಲ್ಲಿ ಕುಳಿತು ಪ್ರಯಾಣಿಸಿದ ಪ್ರಸಂಗ ಕೊಪ್ಪಳದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಹ ಪ್ರಯಾಣಿಕರು ಕನಿಷ್ಠ ಮಾನವೀಯತೆ ಇಲ್ಲದಂತೆ ವರ್ತಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ
ಕೊಪ್ಪಳದಿಂದ ಹುಲಿಗಿಗೆ ಹೊರಟಿದ್ದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿ ತನ್ನ ಮೊಮ್ಮೊಗುವಿಗೆ ಜಾಗ ಇರಲಿಲ್ಲ. ಜನಜಂಗುಳಿಯಿಂದ ತುಂಬಿದ್ದ ಬಸ್ ನೊಳಗೆ ಮಗುವಿಗೆ ಗಾಳಿಯಾಡುತ್ತಿರಲಿಲ್ಲ. ಹೀಗಾಗಿ ನಿಂತುಕೊಂಡರೆ ಮಗುವಿಗೆ ಕಷ್ಟವಾಗುತ್ತದೆ ಎಂದು ವೃದ್ಧೆ ಫುಟ್ ಬೋರ್ಡಿನ ಬಳಿ ಮಗುವನ್ನು ಹಿಡಿದುಕೊಂಡೇ ಕುಳಿತು ಪ್ರಯಾಣಿಸಿದೆ. ಇದು ಈಗ ಜಿಲ್ಲೆಯಲ್ಲಿ ಬಹು ಚರ್ಚೆಗೆ ಕಾರಣವಾಗಿದೆ.
ವೃದ್ಧೆ ಫುಟ್ ಬೋರ್ಡ್ನ ಮೇಲೆ ಕುಳಿತು ಹೀಗೆ ಪ್ರಯಾಣಿಸುವಾಗ ಏನಾದರೂ ತೊಂದರೆ ಆದರೆ ಏನು ಗತಿ ಎಂಬುದು ಹಲವರ ಪ್ರಶ್ನೆ. ಹೀಗಾಗಿ ಸಾರಿಗೆ ಇಲಾಖೆ ಬಸ್ಗಳು ರಷ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೆಚ್ಚುವರಿ ಬಸ್ಗಳನ್ನು ಬಿಟ್ಟರೆ ಈ ಪರಿಸ್ಥಿತಿಯನ್ನು ತಡೆಗಟ್ಟಬಹುದು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಬೀದರ್ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ- ಹುಬ್ಬಳ್ಳಿಯಲ್ಲಿ ವೃದ್ಧೆಗೆ ಕಪಾಳಮೋಕ್ಷ: ವಿಡಿಯೋ ಜಾಲತಾಣದಲ್ಲಿ ವೈರಲ್