'ವೀರ ನರಸಿಂಹ ರೆಡ್ಡಿ' ಚಿತ್ರ ಬಿಡುಗಡೆ: ಪಾವಗಡದಲ್ಲಿ ಅಭಿಮಾನಿಗಳ ಸಂಭ್ರಮ - Actors portraits grand parade at Tumkur border
🎬 Watch Now: Feature Video
ತುಮಕೂರು: ಜಿಲ್ಲೆಯ ಗಡಿಭಾಗದ ತಾಲೂಕು ಪಾವಗಡದಲ್ಲಿ ತೆಲುಗು ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಆಂಧ್ರಪ್ರದೇಶದಲ್ಲಿ ತೆಲುಗು ಚಲನಚಿತ್ರ ಬಿಡುಗಡೆಯಾದರೆ ಇಲ್ಲಿ ಹಬ್ಬದ ವಾತಾವರಣ ಸಾಮಾನ್ಯ. ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ವೀರ ನರಸಿಂಹ ರೆಡ್ಡಿ ಚಿತ್ರ ವಿಶ್ವಾದ್ಯಂತ ಇಂದು ತೆರೆ ಕಂಡಿದ್ದು, ಪಾವಗಡದ ಅಭಿಮಾನಿಗಳು ಹಬ್ಬದ ವಾತಾವರಣ ನಿರ್ಮಿಸಿದ್ದರು. ಬಾಲಯ್ಯ ಪೋಟೋ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಮಾಡಿದರು. ಪಟ್ಟಣದಾದ್ಯಂತ ಅಭಿಮಾನಿಗಳು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ರಸ್ತೆಯುದ್ದಕ್ಕೂ ಫ್ಲೆಕ್ಸ್ಗಳನ್ನು ಕಟ್ಟಿ, ಬೆಳ್ಳಿ ರಥದಲ್ಲಿ ಬಾಲಯ್ಯ ಜೊತೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನೂ ಇಟ್ಟು ಮೆರವಣಿಗೆ ನಡೆಸಿದರು. ವಿವಿಧ ಕಲಾತಂಡಗಳೂ ಭಾಗಿಯಾಗಿದ್ದವು.
Last Updated : Feb 3, 2023, 8:38 PM IST