ಕಾರನ್ನು ಅಡ್ಡಗಟ್ಟಿ, ಸಿನಿಮಾ ಶೈಲಿಯಲ್ಲಿ ದಾಳಿ.. ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು - Cheeklighar gang arrested
🎬 Watch Now: Feature Video
ಸೂರತ್(ಗುಜರಾತ್): ಚೀಕ್ಲಿಘರ್ ಗ್ಯಾಂಗ್‌ನ ಕೆಲ ಆರೋಪಿಗಳನ್ನು ಸೂರತ್ ಕ್ರೈಂ ಬ್ರಾಂಚ್ ಸೂರತ್‌ನಲ್ಲಿ ಬಂಧಿಸಿದೆ. ಪೊಲೀಸರ ಪ್ರಕಾರ ಇವರು 16 ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳು. ಸೂರತ್ ನಗರದ ಬರ್ಡೋಲಿ ದಾಸ್ತಾನ್ ಗೇಟ್ ಬಳಿ 15 ಮಂದಿ ಪೊಲೀಸರು ಈ ಗ್ಯಾಂಗ್ ಸದಸ್ಯರನ್ನು ಪರಾರಿಯಾಗುವ ಮೊದಲು ಸಿನಿಮೀಯ ರೀತಿಯಲ್ಲಿ ಹಿಡಿದಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರ ಮೇಲೆಯೇ ಕಾರನ್ನು ಹತ್ತಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಅವರ ಕಾರನ್ನು ಅಡ್ಡಗಟ್ಟಿ, ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
Last Updated : Feb 3, 2023, 8:24 PM IST