ಸುಗ್ಗಿ ಹಬ್ಬದ ಸೊಬಗು; ಸಂಭ್ರಮಿಸಿದ ಶಾಲಾ ಮಕ್ಕಳು-ವಿಡಿಯೋ
🎬 Watch Now: Feature Video
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಸಂಕ್ರಾಂತಿ ನಂತರವೂ ಸುಗ್ಗಿ ಸಂಭ್ರಮ ಮುಂದುವರೆದಿದೆ. ನೆಲಮಂಗಲ ತಾಲೂಕಿನ ಸೋಲೂರು ಬಳಿಯ ಪ್ರಕೃತಿ ಚಿಕಿತ್ಸಾಲಯದಲ್ಲಿ ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಮರೆಯಾಗುತ್ತಿರುವ ದೇಶಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕಾರಣಕ್ಕೆ ರಾಗಿ ಹುಲ್ಲಿನ ಕಣ, ರಾಶಿ ಪೂಜೆ, ಕೃಷಿ ಪರಿಕರಗಳ ಪೂಜೆ, ಎತ್ತಿನಗಾಡಿ, ಬೀಸುವಕಲ್ಲು ಹಿಡಿದು ರಾಗಿ ಬೀಸುವುದು, ಭತ್ತ ಕುಟ್ಟುವುದು ಹೀಗೆ ಹಳ್ಳಿ ಸೊಗಡಿನ ಜೀವನವೇ ಅಲ್ಲಿ ಅನಾವರಣಗೊಂಡಿತು. ಮಣ್ಣಿನ ಮಡಿಕೆ ಪ್ರಾತ್ಯಕ್ಷಿಕೆ, ಎತ್ತಿನ ಬಂಡಿ ಓಡಿಸಿ, ರಾಗಿ ಬೀಸುವ ಮೂಲಕ ಚಿಣ್ಣರು ಸಂಭ್ರಮಿಸಿದರು.
ಶ್ರೀ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಚೇತನ್ ಕುಮಾರ್ ಮಾತನಾಡಿ, ಸಂಕ್ರಾಂತಿ ನಮ್ಮ ದೇಶಿಯ ಸೊಗಡು. ಇದರ ಸೊಗಸೇ ವಿಭಿನ್ನ. ಇಡೀ ವರ್ಷ ದುಡಿದ ಜಾನುವಾರು, ಕೃಷಿ ಪರಿಕರಗಳಿಗೆ ಪೂಜೆ ಮಾಡಿ ಧನ್ಯತಾ ಭಾವ ಮತ್ತು ಕೃತಜ್ಞತೆಯನ್ನು ಅರ್ಪಿಸುವ ಸಮಯ. ರಾಸುಗಳ ಮೈತೊಳೆದು, ಕೊರಳಿಗೆ ಗೆಜ್ಜೆ ಕಟ್ಟುವ ಹಳ್ಳಿ ಸೊಗಡನ್ನು ಶಾಲೆಯ ಮಕ್ಕಳಿಗೆ ಪರಿಚಯಿಸಿದ್ದೇವೆ. ಮುಂದಿನ ವರ್ಷ ಇನ್ನಷ್ಟೂ ಸೊಗಸಿನ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಕಾನೂನು ತಜ್ಞರಾದ ಪ್ರೋ. ಎನ್ ಆರ್ ಕೃಷ್ಣನ್ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಯ ಚೇತನ್ ಕುಮಾರ್, ಪ್ರಾಂಶುಪಾಲ ಸತೀಶ್ ಕುಮಾರ್, ಆಯುರ್ವೇದ ನ್ಯಾಚೋರೋಥೆರಪಿ ಪ್ರಾಂಶುಪಾಲರಾದ ಮಹೇಶ್, ರಾಜಶೇಖರಯ್ಯ ಪಬ್ಲಿಕ್ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು, ಮಕ್ಕಳು, ಸ್ಥಳೀಯರಾದ ಮೋಟಗಾನಹಳ್ಳಿ ಜಗದೀಶ್, ಪೆದ್ದಣ್ಣ, ಇನ್ನಿತರರಿದ್ದರು.
ಇದನ್ನೂ ಓದಿ: ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ-ವಿಡಿಯೋ