ಗೋಪಾಲಸ್ವಾಮಿ ಬೆಟ್ಟದಲ್ಲಿ ದಿಢೀರ್ ಕಾಡಾನೆ ಎಂಟ್ರಿ: ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು
🎬 Watch Now: Feature Video
Published : Jan 4, 2024, 5:55 PM IST
ಚಾಮರಾಜನಗರ : ಕರ್ನಾಟಕದ ಕಾಶ್ಮೀರ ಎಂತಲೇ ಕರೆಯುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಇಂದು ಕಾಡಾನೆ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಘಟನೆ ನಡೆದಿದೆ.
ಗೋಪಾಲಸ್ವಾಮಿ ಬೆಟ್ಟದ ದೇಗುಲ ಸಮೀಪ ಆಗಾಗ್ಗೆ ಕಾಡಾನೆಯೊಂದು ಎಂಟ್ರಿ ಕೊಡಲಿದ್ದು, ಅದೇ ರೀತಿ ಗುರುವಾರ ಕೂಡ ಕಾಡಾನೆ ಪ್ರತ್ಯಕ್ಷವಾಗಿದೆ. ಇತ್ತ ಕಾಡಾನೆ ಕಂಡೊಡನೆ ರೋಮಾಂಚನಗೊಂಡ ಪ್ರವಾಸಿಗರು ಹುಚ್ಚಾಟ ಮೆರೆದಿದ್ದು, ಆನೆ ಸಮೀಪಕ್ಕೆ ತೆರಳಿ ಫೋಟೋ, ವಿಡಿಯೋ ಮಾಡಿದ್ದಾರೆ. ಕಾಡಾನೆಗಳ ಮುಂದೆ ಹೋಗುವುದು ಅಪಾಯ ಎಂಬುದು ಗೊತ್ತಿದ್ದರೂ ಸಹ ವ್ಹೀಲ್ ಚೇರ್ನಲ್ಲಿ ಬಂದು ವೃದ್ಧೆಯೊಬ್ಬರು ಆನೆಯನ್ನು ವೀಕ್ಷಿಸುತ್ತ ಕುಳಿತಿರುವುದು ಅಚ್ಚರಿ ಮೂಡಿಸಿದೆ.
ಕೆಲವು ವರ್ಷಗಳಿಂದ ಕಾಡಾನೆಯೊಂದು ದೇವಾಲಯಕ್ಕೆ ಸಮೀಪ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಅದೃಷ್ಟವಶಾತ್ ಇಲ್ಲಿಯ ತನಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾಡು ಪ್ರಾಣಿ ಆಗಿರುವ ಹಿನ್ನೆಲೆ ಸುರಕ್ಷತೆ ಮುಖ್ಯ. ನಾವು ಸುರಕ್ಷಿತವಾಗಿರಬೇಕು. ಅದು ಸುರಕ್ಷಿತವಾಗಿರಬೇಕು. ಕೆಲವರು ತೀರಾ ಸಮೀಪಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ರೀತಿ ಕಾಡು ಪ್ರಾಣಿಗಳ ಹತ್ತಿರ ಹೋಗುವುದು ಅಪಾಯ ಎಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗ ಮಹದೇವಸ್ವಾಮಿ ಎಂಬವರು ಹೇಳಿದರು.
ಇದನ್ನೂ ಓದಿ : ರಾಮನಗರ: ಗ್ರಾಮಕ್ಕೆ ನುಗ್ಗಿದ 12 ಕಾಡಾನೆಗಳು.. ಜನರಲ್ಲಿ ಹೆಚ್ಚಿದ ಆತಂಕ