ಗುಡ್ ಲಕ್ ಟೀಮ್ ಭಾರತ್: ಸೆಮಿಫೈನಲ್ ಪಂದ್ಯಕ್ಕೆ ಶುಭ ಕೋರಿದ ಮರಳು ಕಲಾವಿದ ಸುದರ್ಶನ್ - Sudarsan Patnaik creates sand art for India
🎬 Watch Now: Feature Video
Published : Nov 15, 2023, 2:13 PM IST
|Updated : Nov 15, 2023, 3:24 PM IST
ಪುರಿ(ಒಡಿಶಾ): ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಎರಡೂ ತಂಡಗಳು ಗೆಲ್ಲುವ ತವಕದಲ್ಲಿವೆ. ಭಾರತ ಈಗಾಗಲೇ ಲೀಗ್ ಹಂತದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ನಾಳೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಪೈಪೋಟಿ ನಡೆಯಲಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಾಲ್ಕು ತಂಡಗಳು ವಿಶ್ವಕಪ್ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿದ್ದು, ಈ ಬಾರಿ ಯಾರು ವಿಶ್ವಕಪ್ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲು ದೇಶದೆಲ್ಲೆಡೆ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿರುವ ಭಾರತಕ್ಕೆ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಪುರಿಯ ಸಮುದ್ರ ತೀರದಲ್ಲಿ ಬ್ಯಾಟ್ ಮಾದರಿ ಮರಳು ಕಲಾಕೃತಿಯನ್ನು ಮಾಡಿರುವ ಅವರು, ಗುಡ್ ಲಕ್ ಟೀಮ್ ಭಾರತ್ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮರಳಲ್ಲರಳಿದ ವಿರಾಟ್ ಕೊಹ್ಲಿ: ಇದು ಕಲಾವಿದ ಸುದರ್ಶನ್ ಪಟ್ನಾಯಕ್ ಕೈಚಳಕ- ವಿಡಿಯೋ