ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳಿಗೆ ಮರಳು ಕಲಾಕೃತಿಯಿಂದ ಅಭಿನಂದನೆ ಕೋರಿದ ಪಟ್ನಾಯಕ್ - ಈಟಿವಿ ಭಾರತ ಕನ್ನಡ
🎬 Watch Now: Feature Video
95ನೇ ಆಸ್ಕರ್ ಚಲನಚಿತ್ರ ಪ್ರಶಸ್ತಿಗಳಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ. ಪ್ರತಿಷ್ಟಿತ ಅಕಾಡೆಮಿ ಅವಾರ್ಡ್ಸ್ 2023 ಸಮಾರಂಭದಲ್ಲಿ ಭಾರತಕ್ಕೆ ಈ ಬಾರಿ ಎರಡು ಪ್ರಶಸ್ತಿಗಳು ಆರಿಸಿ ಬಂದಿವೆ. ಒಂದು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನೆಮಾದ ನಾಟು ನಾಟು ಹಾಡಿಗೆ 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮತ್ತೊಂದು ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಗುನೀತ್ ಮೊಂಗಾ ನಿರ್ಮಾಣದ 'ದ ಎಲಿಫೆಂಟ್ ವಿಸ್ಪರರ್ಸ್' ಗೆ ಆಸ್ಕರ್ ಅವಾರ್ಡ್ ಲಭಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.
ಈ ಹಿನ್ನೆಲೆ ಮರಳು ಕಲಾಕೃತಿ ಮೂಲಕ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶುಭಾಶಯ ಕೋರಿದ್ದಾರೆ. ಪುರಿಯ ನೀಲಾದ್ರಿ ಸಮುದ್ರ ತೀರದಲ್ಲಿ ಸುಂದರವಾದ ಮರಳು ಕಲಾಕೃತಿಯನ್ನು ಮಾಡಿದ್ದು, ದೇಶದ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಈ ಮರಳು ಕಲಾಕೃತಿ ಮೂಲಕ ಎರಡೂ ಚಿತ್ರ ತಂಡಗಳಿಗೆ ಸುದರ್ಶನ್ ಪಟ್ನಾಯಕ್ ವಿಶೇಷ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ : ಭಾರತೀಯ ಸಿನಿಮಾಗೆ ಆಸ್ಕರ್.. ಹೊಸ ತಲೆಮಾರಿಗೆ ಇದು ಸ್ಫೂರ್ತಿ: ನಟ ಅನುಪಮ್ ಖೇರ್ ಸಂತಸ