ಹಾಸ್ಟೆಲ್ ವಾರ್ಡನ್ ವಿರುದ್ಧ ದೌರ್ಜನ್ಯ ಆರೋಪ: ಹಾಸ್ಟೆಲ್ ಬಿಟ್ಟು ತಮ್ಮ ಗ್ರಾಮಗಳಿಗೆ ತೆರಳಿದ ವಿದ್ಯಾರ್ಥಿಗಳು
🎬 Watch Now: Feature Video
Published : Dec 13, 2023, 11:04 PM IST
ಹಾವೇರಿ: ಹಾಸ್ಟೆಲ್ ವಾರ್ಡನ್ ದೌರ್ಜನ್ಯ ಮತ್ತು ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದ ಘಟನೆ ಹಾವೇರಿ ತಾಲೂಕು ಗಾಂಧಿಪುರ ಗ್ರಾಮದಲ್ಲಿ ನಡೆದಿದೆ. ಹಾವೇರಿ ತಾಲೂಕು ಗಾಂಧಿಪುರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಮನೆಗೆ
ಳಿಗೆ ತೆರಳಿದ್ದಾರೆ. ಊಟ ಮತ್ತು ಮೂಲ ಸೌಕರ್ಯಗಳ ಬಗ್ಗೆ ಪ್ರಶ್ನಿಸಿದರೆ ವಾರ್ಡನ್ ದೌರ್ಜನ್ಯ ನಡೆಸಿ ಮತ್ತು ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದಕ್ಕೂ ಮೊದಲು ವಿದ್ಯಾರ್ಥಿಗಳು, ಹಾಸ್ಟೆಲ್ ಎದುರು ಬ್ಯಾಗ್ ಸಮೇತ ಹೊರಗಡೆ ಕುಳಿತು ವಾರ್ಡನ್ ಲಕ್ಷ್ಮಣ ಲಮಾಣಿ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ವರ್ಗಾವಣೆ ಮಾಡದಿದ್ದರೆ ಬ್ಯಾಗ್ ಸಮೇತ ಊರಿಗೆ ತೆರುಳುವದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ಸಣ್ಣಪುಟ್ಟ ವಿಚಾರಗಳಿಗೆ ವಾರ್ಡನ್ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಹಾಸ್ಟೆಲ್ ವಾರ್ಡನ್ ವರ್ಗಾವಣೆ ಮಾಡದ ಹಿನ್ನೆಲೆಯಲ್ಲಿ ಬ್ಯಾಗ್ ಹಿಡಿದು ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಕೆಲ ದಿನಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಡಾ.ಬಿ.ಆರ್.ಅಂಬೇಡ್ಕರ ವಸತಿ ನಿಲಯದ ವಿದ್ಯಾರ್ಥಿಗಳು ವಾರ್ಡನ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳಿಗೆ ದೈಹಿಕ ಕಿರುಕುಳ ನೀಡಿದ ವಾರ್ಡನ್ ಸವಿತಾರನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ರಣಕಹಳೆ: ಯಡಿಯೂರಪ್ಪ, ವಿಜಯೇಂದ್ರ ವಾಗ್ದಾಳಿ