ಮಳೆಗಾಗಿ ವಿಚಿತ್ರ ಆಚರಣೆಗಳು: ಬಂಡೆಯ ಮೇಲೆ ಸಾಮೂಹಿಕ ಊಟ ಮಾಡುವ ಈ ಪದ್ಧತಿ ನಿಮಗೆ ತಿಳಿದಿದೆಯೇ?

🎬 Watch Now: Feature Video

thumbnail

ಚಿತ್ತೂರು (ಆಂಧ್ರಪ್ರದೇಶ): ವರುಣನಿಗಾಗಿ ಯಾಗ, ಪೂಜೆಗಳನ್ನು ಮಾಡುವುದು ಸಾಮಾನ್ಯ. ಆದರೆ, ಕೆಲವರು ವಿಚಿತ್ರ ನಂಬಿಕೆಗಳನ್ನು ಹೊಂದಿರುತ್ತಾರೆ. ಮಳೆ ಬರುತ್ತದೆ ಎಂದು ಕಪ್ಪೆಗಳಿಗೆ ಹಲವೆಡೆ ಮದುವೆ ಮಾಡುತ್ತಾರೆ. ಈ ವಿಧಾನವು ಅನೇಕ ಜನರಿಗೆ ತಿಳಿದಿದೆ. ಇತ್ತೀಚೆಗೆ ಕರ್ನಾಟಕದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಸಮಾಧಿಗಳನ್ನು ಅಗೆದು ಶವಗಳಿಗೆ ನೀರುಣಿಸಲಾಗಿತ್ತು. ಕಳೆದ ವರ್ಷ ಮಳೆಗಾಗಿ ಮಾಡಿದ್ದ ಪದ್ಧತಿಯನ್ನೇ ಈ ಬಾರಿಯೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದರು. 

ಮತ್ತೊಂದೆಡೆ ಚಿತ್ತೂರು ಜಿಲ್ಲೆಯ ಕುಪ್ಪಂ ಕ್ಷೇತ್ರದ ಗುಡುಪಲ್ಲಿ ಮಂಡಲದ ಬೇಗಿಲಪಲ್ಲಿ ಪಂಚಾಯತ್ ವ್ಯಾಪ್ತಿಯ ಜನರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸುತ್ತಲಿನ ಗ್ರಾಮಗಳ ನೂರಾರು ಜನರು ಚಿಕ್ಕ ಮಲ್ಲಪ್ಪನ ಬೆಟ್ಟದ ತುದಿ ತಲುಪಿ ಬೆಟ್ಟದಲ್ಲಿರುವ ಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಟ್ಟದ ಮೇಲಿನ ಬಂಡೆಯ ಮೇಲೆ ತೆರಳಿ ಸಾಮೂಹಿಕವಾಗಿ ಊಟ ಮಾಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.

ಬಂಡೆಯ ಮೇಲೆ ಊಟ ಮಾಡಿದ್ರೆ ಮಳೆಯಾಗುವ ನಂಬಿಕೆ: ಕಳೆದ 500 ವರ್ಷಗಳಿಂದ ಹಿರಿಯರು ಅನುಸರಿಸಿಕೊಂಡು ಬಂದ ಸಂಪ್ರದಾಯದಂತೆ ಮಳೆಗಾಗಿ ಬಂಡೆಯ ಮೇಲೆಯೇ ಊಟ ಮಾಡಿದರು. ಬಂಡೆಕಲ್ಲಿನ ಮೇಲೆ ಊಟ ಮಾಡಿದರೆ ಭಗವಂತ ಸಮೃದ್ಧ ಮಳೆಯನ್ನು ಕರುಣಿಸಲಿದ್ದಾರೆ ಎಂದು ರೈತರು ತಿಳಿಸಿದರು. ತೆಲಂಗಾಣದಲ್ಲೂ ಇದೇ ಪದ್ಧತಿ ಮುಂದುವರೆದಿದೆ. “ವರದ ಪಾಶಂ” ಎಂಬ ಈ ಕಾರ್ಯಕ್ರಮದ ಅಂಗವಾಗಿ ಗಂಗಮ್ಮನ ಜಾತ್ರೆಯನ್ನು ಹಮ್ಮಿಕೊಂಡು ಬಂಡೆಯ ಮೇಲೆ ಊಟ ಮಾಡುವ ಸಂಪ್ರದಾಯ ಈಗಲೂ ಮುಂದುವರೆದಿದೆ.

ಇದನ್ನೂ ಓದಿ: ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.