ಯಲಹಂಕದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀನಿವಾಸ ಕಲ್ಯಾಣೋತ್ಸವ- ವಿಡಿಯೋ - etv bharat kannada
🎬 Watch Now: Feature Video
ಯಲಹಂಕ: ಇಲ್ಲಿನ ವ್ಹೀಲ್ಸ್ ಮತ್ತು ಆಕ್ಸೆಲ್ ಮೈದಾನದಲ್ಲಿ ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ತಿರುಪತಿ ಲಡ್ಡು ವಿತರಿಸಲಾಯಿತು. ಕಲ್ಯಾಣೋತ್ಸವದ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಧನ್ಯವಾದ ಅರ್ಪಿಸಿದರು. ಎಸ್.ಆರ್.ವಿಶ್ವನಾಥ್ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ - ಪೊಲೀಸ್ ಕಮೀಷನರ್ ಗುಪ್ತಾ ಸಖತ್ ಡಾನ್ಸ್