ಐದೇ ನಿಮಿಷದಲ್ಲಿ ಡ್ರೋನ್ ಮೂಲಕ ಭತ್ತದ ಬೆಳೆಗೆ ಔಷಧಿ ಸಿಂಪಡಣೆ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16092940-thumbnail-3x2-vny.jpg)
ಗಂಗಾವತಿಯಲ್ಲಿ ಕೇವಲ ಐದೇ ನಿಮಿಷದಲ್ಲಿ ಒಂದು ಎಕರೆಯಷ್ಟು ಪ್ರಮಾಣದ ಭತ್ತದ ಗದ್ದೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಇಲ್ಲಿನ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರ ಗಮನ ಸೆಳೆದರು. ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಪ್ರಾಯೋಗಿಕ ಸಿಂಪಡಣೆ ಕೈಗೊಂಡಿದ್ದ ಕೆವಿಕೆಯ ವಿಜ್ಞಾನಿಗಳು, ಕೇವಲ ಐದೇ ಐದು ನಿಮಿಷದಲ್ಲಿ ಡ್ರೋನ್ ಯಂತ್ರದ ಮೂಲಕ ಇಡೀ ಭತ್ತದ ಗದ್ದೆಗೆ ಔಷಧಿ ಸಿಂಪಡಿಸಿದರು. ಇತ್ತೀಚಿನ ದಿನಗಳಲ್ಲಿ ಕೃಷಿಕೂಲಿಕಾರರ ಕೊರತೆ ಕಂಡು ಬರುತ್ತಿದೆ. ಹೀಗಾಗಿ ರೈತರಿಗೆ ಹಣ, ಸಮಯ ಉಳಿತಾಯದಲ್ಲಿ ಈ ಡ್ರೋನ್ ಮುಖ್ಯಪಾತ್ರ ವಹಿಸುತ್ತಿದೆ. ತಂತ್ರಜ್ಞಾನದ ಸದ್ಬಳಕೆ ಮಾಡಿದಂತಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದರ ಉಪಯೋಗ ಸಿಗಲಿದೆ ಎಂದು ಕೆವಿಕೆಯ ಮುಖ್ಯಸ್ಥ ರಾಘವೇಂದ್ರ ಎಲಿಗಾರ ಹೇಳಿದರು.
Last Updated : Feb 3, 2023, 8:26 PM IST